Kadaba :ಲಂಚ ಪಡೆಯುತ್ತಿದ್ದಾಗಲೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಿಡಿಓ

ಕಡಬ : ಕಳೆದ ಆರು ವರ್ಷಗಳಿಂದ ಖಾತೆ ಬದಲಾವಣೆಗೆ ಅರ್ಜಿದಾರನ್ನು ಸತಾಯಿಸುತ್ತಿದ್ದ ಪಿಡಿಓ ಇಂದು ಲಂಚ ಪಡೆಯುತ್ತಿದ್ದಾಗ ಲೋಕಾಯಯಕ್ತ ಬಲೆಗೆ ಬಿದ್ದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್ ಪಿಡಿಓ ಮಹೇಶ್ ಎಂಬಾತ ಅರ್ಜಿದಾರರಿಂದ ಖಾತೆ ಬದಲಾವಣೆಗೆ 20 ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಅರ್ಜಿದಾರರು ನೊಂದು ನೇರ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಲಂಚದ 20 ಸಾವಿರ ರೂಪಾಯಿ ಹಣ ಅರ್ಜಿದಾರರಿಂದ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ದಕ್ಷಿಣ ಕನ್ನಡ ಲೋಕಾಯುಕ್ತ ಎಸ್ಪಿ ಸೈಮನ್ , ಡಿವೈಎಸ್ಪಿ ಚೆಲುವರಾಜ್ , ಡಿವೈಎಸ್ಪಿ ಕಲಾವತಿ , ಇನ್ಸ್‌ಪೆಕ್ಟರ್ ಅಮಾನುಲ್ಲಾ ,ಇನ್ಸ್‌ಪೆಕ್ಟರ್ ವಿನಯಕ ಬಿಲ್ಲವ, ನೇತೃತ್ವದ ಸಿಬ್ಬಂದಿ ಕಾರ್ಯಾಚರಣೆ ಭಾಗವಹಿಸಿದ್ದರು.

Related Posts

Leave a Reply

Your email address will not be published.