ಮೂಡುಬಿದಿರೆ: ವಿವಿಧ ಸಂಸ್ಥೆಗಳಿಂದ ರಕ್ತದಾನ ಶಿಬಿರ

ಮೂಡುಬಿದಿರೆ: ರಕ್ತದಾನ ಮಾಡುವುದರಿಂದ ಓರ್ವ ವ್ಯಕ್ತಿಯ ಜೀವವನ್ನು ಉಳಿಸಲು ಸಾಧ್ಯವಿದೆ. ನಾವು ಅಂಗಾಂಗ ದಾನದ ಬಗ್ಗೆಯೂ ಗಮನಹರಿಸಬೇಕಾಗಿದೆ. ವಿದೇಶಗಳಲ್ಲಿ ಹೆಚ್ಚಿನ ಜನರು ಅಂಗಾಂಗ ದಾನ ಮಾಡುತ್ತಾರೆ.ಅಂಗಾಂಗ ದಾನ ಮಾಡುವುದರಿಂದ ಮೂರ್ನಾಲ್ಕು ಜನರನ್ನು ಬದುಕಿಸಬಹುದು ಆದ್ದರಿಂದ ತಾನೂ ಕೂಡಾ ಅಂಗಾಂಗ ದಾನ ಮಾಡುವ ಇಚ್ಛೆಯನ್ನು ಹೊಂದಿದ್ದೇನೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಅವರು ಹೇಳಿದರು.

ಅವರು ಮೂಡುಬಿದಿರೆಯ ವಲಯದ ವಿವಿಧ ಸಂಸ್ಥೆಗಳಾದ ಲಯನ್ಸ್ ಕ್ಲಬ್, ಭಾರತೀಯ ಕಥೋಲಿಕ್ ಯುವ ಸಂಚಲನ, ಮೆಸ್ಕಾಂ ಉಪ ವಿಭಾಗ, ಸಮಾಜ ಮಂದಿರ ಸಭಾ (ರಿ) ಹಾಗೂ ಆಳ್ವಾಸ್ ಹೆಲ್ತ್ ಸೆಂಟರ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಮಾಜ ಮಂದಿರದಲ್ಲಿ ನಡೆದ ರಕ್ತದಾನ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಮೂಡುಬಿದಿರೆ ಚರ್ಚಿನ ಧರ್ಮಗುರು ಓನಿಲ್ ಡಿ’ಸೋಜಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಹಿಂದೆ ರಕ್ತದಾನ ಮಾಡಲು ಜನರು ಹೆದರುತ್ತಿದ್ದರು ಆದರೆ ಈಗ ಎಲ್ಲಾ ವರ್ಗದ ಜನರೂ ಮುಂದೆ ಬರುತ್ತಿರುವುದು ಮೆಚ್ಚುವಂತಹ ಕೆಲಸ ಎಂದರು.
ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮೋಹನ್ ಟಿ., ಹೆಚ್ ಡಿ ಎಫ್ ಸಿ ಬ್ಯಾಂಕಿನ ಬ್ರಾಂಚ್ ಓಪರೇಷನಲ್ ಮೆನೇಜರ್ ಸುಶ್ಮಿತಾ ಶೆಟ್ಟಿ, ಆಳ್ವಾಸ್ ನ ರಾಜೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Related Posts

Leave a Reply

Your email address will not be published.