ಕಡಬದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಗದ್ದಲ

ಪ್ರಮುಖ ಸ್ಥಾನಮಾನಗಳನ್ನು ನೀಡುವ ವೇಳೆ ಮುಸ್ಲಿಂ ಸಮುದಾಯವನ್ನು ಅವಗಣಿಸಲಾಗಿದೆ ಎಂದು ಮುಸ್ಲಿಂ ಮುಖಂಡರು ಶನಿವಾರ ಜರಗಿದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಪಕ್ಷದಲ್ಲಿ ತಮ್ಮ ಸಮುದಾಯದ ಮುಖಂಡರನ್ನು ಅವಗಣಿಸಲಾಗಿದೆ ಎಂದು ಸಭೆ ಆರಂಭವಾಗುವ ಮುನ್ನ ಜಿಲ್ಲಾ ಮುಖಂಡರ ಜತೆ ಮುಸ್ಲಿಂ ಕಾರ್ಯಕರ್ತರು ವಾಗ್ವಾದಕ್ಕಿಳಿದರು. ಆ ವೇಳೆ ಸಭಾಂಗಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ, ಪಕ್ಷದ ಅಭ್ಯರ್ಥಿ ಪದ್ಮರಾಜ್ ಆರ್. ಹಾಗೂ ಇತರ ಮುಖಂಡರು ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಬದಲಾಗಿ ತಮಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟಿಸಿ ಮುಸ್ಲಿಂ ಸಮುದಾಯದ ಪ್ರಮುಖರಾದ ಅಶ್ರಫ್ ಶೇಡಿಗುಂಡಿ, ಕೆ.ಎಂ.ಹನೀಫ್, ಫಝಲ್ ಕೋಡಿಂಬಾಳ, ಎ.ಎಸ್.ಶರೀಫ್, ಶಾಕಿರ್ ಪಿಲ್ಯ ಮುಂತಾದವರ ನೇತೃತ್ವದಲ್ಲಿ ಹಲವು ಮಂದಿ ಮುಸ್ಲಿಂ ಸಮುದಾಯದವರು ಸಭಾಂಗಣದಿಂದ ಹೊರನಡೆದರು.

Related Posts

Leave a Reply

Your email address will not be published.