ಕಡಬ :ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಮತ್ತು ಅವಕಾಶಗಳ ಬಗ್ಗೆ ಶೈಕ್ಷಣಿಕ ಮಾರ್ಗದರ್ಶನ

ಒಕ್ಕಲಿಗ ಗೌಡ ಸೇವಾ ಸಂಘ (ರಿ.) ಕಡಬ ತಾಲೂಕು ಇದರ ವತಿಯಿಂದ ಇಂದು ಒಕ್ಕಲಿಗ ಗೌಡ ಸಮುದಾಯ ಭವನ ಹೊಸಮಠ ಇಲ್ಲಿ, ಕಡಬ ತಾಲೂಕಿನ ಎಲ್ಲಾ ಸಮುದಾಯದ ೯ನೇ, ೧೦ನೇ ತರಗತಿ ಮತ್ತು ಪ್ರಥಮ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಶಿಕ್ಷಣ, ಉದ್ಯೋಗವಕಾಶಗಳು, ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃಧ್ಧಿ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಮತ್ತು ಅವಕಾಶಗಳ ಬಗ್ಗೆ ಶೈಕ್ಷಣಿಕ ಮಾರ್ಗದರ್ಶನ ಮತ್ತು ಮಾಹಿತಿ ಕಾರ್ಯಾಗಾರವು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ಸುರೇಶ್ ಗೌಡ ಬೈಲು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಹಿರಿಯರಾದ ಶ್ರೀ ದೇವಣ್ಣ ಗೌಡ ನೆಲ್ಲ ನಿವೃತ್ತ ಮುಖ್ಯ ಗುರುಗಳು, ಇವರು ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ರಾಷ್ರ್ಟೀಯ ಮಟ್ಟದ ತರಬೇತುದಾರರಿಂದ ಶೈಕ್ಷಣಿಕ ಮಾಹಿತಿ ಕಾರ್ಯಾಗಾರವು ಮೂರು ಹಂತದ ಅಧಿವೇಶನದಲ್ಲಿ ನಡೆಯಿತು. ಮೊದಲನೇ ಅಧಿವೇಶನದಲ್ಲಿ ಡಾ.ಮಹೆಶ್ ಕೆ.ಕೆ ಪ್ರಾಧ್ಯಾಪಕರು ನಾಗಾರ್ಜುನ ತಾಂತ್ರಿಕ ಮಹಾವಿದ್ಯಾಲಯ ದೇವನಹಳ್ಳಿ ಬೆಂಗಳೂರು ಇವರು ಎಸ್.ಎಸ್. ಎಲ್. ಸಿ. ಮತ್ತು & ಪಿ.ಯು.ಸಿ ಶಿಕ್ಷಣದ ನಂತರ ಮುಂದೇನು ಮತ್ತು ಉದ್ಯೋಗವಕಾಶಗಳ ಕುರಿತಾಗಿ, ಹಾಗೂ ಎರಡನೇ ಅಧಿವೇಶನದಲ್ಲಿ ಡಾ .ಶಿವಕುಮಾರ್ ಹೊಸೊಳಿಕೆ, ವಿಶ್ರಾಂತ ಪ್ರಾದೇಶಿಕ ನಿರ್ದೇಶಕರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ಇವರು ಉದ್ಯಮಶೀಲತೆ ಹಾಗೂ ಕೌಶಲ್ಯಾಭಿವೃಧ್ಧಿ ವಿಷಯದ ಬಗ್ಗೆ, ಶ್ರೀ ಗೋಪಾಲಕೃಷ್ಣ ಪುಯಿಲ, ವಿಶ್ರಾಂತ ಜಂಟಿ ಆಯುಕ್ತರು ಅಬಕಾರಿ ಇಲಾಖೆ ಇವರು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಮತ್ತು ಅವಕಾಶಗಳ ಕುರಿತಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸ್ಪಂದನಾ ಸಮುದಾಯ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಕೇಶವ ಅಮೈ ಇವರು ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃಧ್ಧಿಯ ಮೂಲಕ ಸ್ವ-ಉದ್ಯಮಿಗಳಾಗುವ ಕುರಿತಾಗಿ ಮಾತನಾಡಿದರು.ಮಾಹಿತಿ ಕಾರ್ಯಗಾರದಲ್ಲಿ ಸುಮಾರು 150 ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘದ ಸಂಘಟನಾ ಕಾರ್ಯದರ್ಶಿಗಳಾದ ಶಿವರಾಮ್ ಗೌಡ ಏನೆಕಲ್ಲು , ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಂಜೋಡಿ, ನಿರ್ದೇಶಕರಾದ ಶ್ರೀ ಸರ್ವೋತ್ತಮ ಗೌಡ ಪಂಜೋಡಿ, ವೆಂಕಟರಮಣ ಗೌಡ ಪಾಂಗ, ಚಂದ್ರಶೇಖರ ಗೌಡ ಕೋಡಿಬೈಲು, ಶ್ರೀಮತಿ ಆಶಾ ತಿಮ್ಮಪ್ಪ ಗೌಡ, ಗಿರೀಶ್ ಎ.ಪಿ., ಕುಶಾಲಪ್ಪ ಗೌಡ ಅನಿಲ, ಶ್ರೀಮತಿ ನೀಲಾವತಿ ಶಿವರಾಂ, ದಯಾನಂದ ಆಲಡ್ಕ, ರಾಧಾಕೃಷ್ಣ ಗೌಡ ಕೆರ್ನಡ್ಕ, ಗಣೇಶ್ ಕೈಕುರೆ ಹಿರಿಯರಾದ ತಿಮ್ಮಪ್ಪ ಗೌಡ ಕುಂಡಡ್ಕ , ಶ್ರೀಧರ ಗೌಡ ಗೋಳ್ತಿಮಾರು, ತಾಲೂಕು ಯುವ ಘಟಕದ ಅಧ್ಯಕ್ಷರಾದ ಪೂರ್ಣೇಶ್ ಬಲ್ಯ, ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ವೀಣಾ ಕೊಲ್ಲೆಸಾಗು, ಕಾರ್ಯದರ್ಶಿಗಳಾದ ಲಾವಣ್ಯ ಮಂಡೆಕರ ಇವರು ಉಪಸ್ಥಿತರಿದ್ದರು.
ಒಕ್ಕಲಿಗ ಗೌಡ ಸೇವಾ ಸಂಘದ ಸಮನ್ವಯ ಅಧಿಕಾರಿಗಳಾದ ವಾಸುದೇವ ಗೌಡ ಕೋಲ್ಪೆ ಸ್ವಾಗತಿಸಿ, ನಿದೇರ್ಶಕರಾದ ಪ್ರವೀಣ್ ಕುಂಟ್ಯಾನ ವಂದಿಸಿದರು. ಸಂಘದ ವ್ಯವಸ್ಥಾಪಕರಾದ ಅಶೋಕ್ ಶೇಡಿ ಕಾರ್ಯಕ್ರಮವನ್ನು ನಿರೂಪಿಸಿದರು.

Related Posts

Leave a Reply

Your email address will not be published.