ಕಾರ್ಕಳ; ಬಸ್ಸ್ಟ್ಯಾಂಡ್ ಗಣಪತಿ ಎಂದು ಪ್ರಸಿದ್ಧಿ ಪಡೆದಿರುವ 18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಗಸ್ಟ್ 27 ರಿಂದ ಆಗಸ್ಟ್ 28 ರವರೆಗೆ ಜರುಗಲಿದ್ದು, ಸಾವಿರಾರು ಭಕ್ತರು ಇಲ್ಲಿಗ ಆಗಮಿಸಿ ಗಣಪನ ದರ್ಶನ ಪಡೆಯುತ್ತಾರೆ. ಅದಲ್ಲದೆ ಇಲ್ಲಿ ಆಗಮಿಸುವ ಭಕ್ತಾದಿಗಳಿಂದ ಕಾಣಿಕೆ ರೂಪದಿಂದ ಸಂಗ್ರಹವಾಗುವ ಹಣವನ್ನು ನಾವು ಬಡಬಗ್ಗರಿಗೆ ಹಾಗೂ ಅವರ ವೈದ್ಯಕೀಯ ಚಿಕಿತ್ಸೆ ಹಾಗೂ ಶಿಕ್ಷಣಕ್ಕೆ ನೀಡಿ ಅವರಿಗೆ ನೆರವಾಗುತ್ತೇವೆ ಎಂದು ಸಮಿತಿಯ ಗೌರವಾಧ್ಯಕ್ಷರಾದ ಶುಭದ ರಾವ್ ಮಾಧ್ಯಮದೊಂದಿಗೆ ಹೇಳಿದರು.ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಸುರೇಶ್ ದೇವಾಡಿಗ, ಶಿವಾಜಿ ರಾವ್, ರವಿಕುಮಾರ್, ರಾಜರಾಮ್ ಕಾಮತ್, ಪ್ರವೀಣ್ ಮಡಿವಾಳ್,ಹಾಗೂ ಇನ್ನಿತರರು ಉಪಸ್ಥಿರಿದರು.
