ಕಾರ್ಕಳ: ಉರುಳಿಗೆ ಬಿದ್ದ ಚಿರತೆ – ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ

ಸಾಣೂರು ಗ್ರಾಮದ ಇಂದಿರಾನಗರ ಹಲ್ಲೆಕಿ ಪರಿಸರದಲ್ಲಿ ಚಿರತೆಯೊಂದು ಉರುಳಿಗೆ ಬಿದ್ದ ಘಟನೆ ನಡೆದಿದೆ.

ರಾತ್ರಿ 9 ಗಂಟೆಗೆ ಬೈಕಿ ನಲ್ಲಿ ದಾರಿಯಲ್ಲಿ ಹೋಗುತಿದ್ದ ಮೆಸ್ಕಾಂ ಇಲಾಖೆಯ ದೇವಣ್ಣ ರಾವ್ ಮತ್ತು ಸಾಣೂರು ಪಂಚಾಯತ್ ಸದಸ್ಯ ಪ್ರಕಾಶ್ ರಾವ್ ಇಬ್ಬರು ಚಿರತೆ ಘರ್ಜಿಸುವ ಸದ್ದನು ಕೇಳಿ ವೀಕ್ಷಿಸಿದಾಗ ಚಿರತೆ ಉರುಳಿಗೆ ಬಿದ್ದಿರುವುದು ಕಂಡು ಬಂದಿದೆ.

ತಕ್ಷಣ ಕಾರ್ಕಳ ನಗರದ ಸಾಮಾಜಿಕ ಕಾರ್ಯಕರ್ತ ಪುರಸಭೆಯ ಮಾಜಿ ಸದಸ್ಯರಾದ ಪ್ರಕಾಶ್ ರಾವ್ ಅವರಿಗೆ ವಿಷಯವನ್ನು ತಿಳಿಸಿ ಕೂಡಲೇ ಅವರು ಕಾರ್ಯ ಪ್ರವೃತರಾಗಿ ಅರಣ್ಯ ಇಲಾಖೆ, ವನ್ಯಜೀವಿ ಸಂರಕ್ಷಣಾ ವಿಭಾಗಕ್ಕೆ ತಿಳಿಸಿದ್ದಾರೆ. ನಂತರ ಆರ್.ಎಫ್.ಒ ವಲಯ ಅಧಿಕಾರಿ ಪ್ರಭಾಕರ್ ಕುಲಾಲ್, ಕೇಂದ್ರ ಘಟಕದ ಉಪವಲಯಾಧಿಕಾರಿ ಪ್ರಕಾಶ್ ಚಂದ್ರ, ರಾಘವೇಂದ್ರ ಶೆಟ್ಟಿ, ಜಯರಾಮ್,ಚಂದ್ರಕಾಂತ್ ಪೌಲ್,ವಿತೇಶ್ ಶೆಟ್ಟಿ ಅರಣ್ಯ ವಿಕ್ಷಕ ಬಾಬು ಪೂಜಾರಿ ಕಾರ್ಯಾಚರಣೆ ಮಾಡಿ ಮಂಗಳೂರಿನ ಪಶು ವೈದ್ಯರು ಹಾಗೂ ಅರಿವಳಿಕೆ ತಜ್ಞರಾದ ಡಾ. ಯಶಸ್ವಿ ನಾರವಿ , ಡಾ. ಮೇಘನಾ, ಡಾ. ಕೀರ್ತನ ಜೋಶಿ ಸ್ಥಳಕ್ಕೆ ಆಗಮಿಸಿ ಚಿರತೆಗೆ ಗನ್ ಮೂಲಕ ಅರವಳಿಕೆ ಚುಚ್ಚು ಮದ್ದನ್ನು ನೀಡಿ ಚಿರತೆಯನ್ನು ಸೆರೆ ಹಿಡಿಯಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯ ಸತೀಶ್ ಪೂಜಾರಿ,ಸಂತೋಷ್ ರಾವ್ ಕಾಳಿಕಾಂಬಾ ಹಾಗೂ ಸ್ಥಳೀಯ ಜನರು ಸುಮಾರು 5 ಗಂಟೆಗಳ ಕಾಲ ಚಿರತೆಯನ್ನು ರಾತ್ರಿ ವೇಳೆ ಸೆರೆ ಹಿಡಿಯುವ ಕಾರ್ಯವನ್ನು ವೀಕ್ಷಿಸಿದರು.

ಸಾಣೂರು, ಮಿಯಾರು ಗ್ರಾಮ, ಕಾರ್ಕಳ ನಗರ ಕಾಳಿಕಾಂಬಾ ಪ್ರದೇಶದಲ್ಲಿ ಚಿರತೆ ಹಾವಳಿ ತುಂಬಾ ಇದ್ದು ಇದೀಗ ಚಿರತೆಯ ಸೆರೆಯಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ.

Related Posts

Leave a Reply

Your email address will not be published.