ಮಣಿಪುರ ಜನಾಂಗೀಯ ಸಂಘರ್ಷ ನಿಯಂತ್ರಿಸಲು ಕೇಂದ್ರ ಸರಕಾರ ವಿಫಲ : ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ಹೇಳಿಕೆ

ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷ ಮತ್ತು ಒಂದು ನಿರ್ದಿಷ್ಟ ಪಂಗಡದ ಮಹಿಳೆಯರ ಮೇಲಿನ ಅಮಾನವೀಯ ಲೈಂಗಿಕ ದೌರ್ಜನ್ಯ ವಿಶ್ವದ ಎದುರು ದೇಶ ತಲೆ ತಗ್ಗಿಸುವಂತೆ ಮಾಡಿದೆ. ಇದಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಅಲ್ಲಿನ ರಾಜ್ಯ ಸರಕಾರದ ಬೇಜವಾಬ್ಧಾರಿ ನಡೆಯೇ ನೇರ ಕಾರಣ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಹೇಳಿದ್ದಾರೆ.
ಅವರು ಕಾರ್ಕಳದ ಕೇಂದ್ರ ಬಸ್ ನಿಲ್ದಾಣದ ಬಳಿ, ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿರುದ್ದ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಜಂಟಿಯಾಗಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತಾಡುತ್ತಿದ್ದರು.
ಹಿರಿಯ ನ್ಯಾಯವಾದಿ ಕಾಂಗ್ರೆಸ್ ನಾಯಕ ಶೇಖರ ಮಡಿವಾಳ ಮಾತನಾಡಿ, ತನ್ನ ಪಕ್ಷದ ಹೊಗಳು ಭಟ್ಟರಿಂದ ವಿಶ್ವ ಗುರುವೆಂದು ಗುರುತಿಸ್ಪಡುವ ಪ್ರಧಾನಿ ಮೋದಿ ಯವರು ತನ್ನದೆ ದೇಶದ ಮಣಿಪುರದ ದುರಂತ ಘಟನೆಯನ್ನು ನಿಭಾಯಿಸಲಾಗದೇ ಹೋದದ್ದು, ದೇಶದ ದೌರ್ಭಾಗ್ಯ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗದ ಉಪಾಧ್ಯಕ್ಷ ಡಿ.ಆರ್. ರಾಜು, ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಮುಖಂಡರಾದ ಸುರೇಂದ್ರ ಶೆಟ್ಟಿ, ಇಂಟಕ್ ಜಿಲ್ಲಾಧ್ಯಕ್ಷ ಕಾಬೆಟ್ಟು ಕಿರಣ್ ಹೆಗ್ಡೆ, ಯುವ ಕಾಂಗ್ರೆಸ್ ಮುಖಂಡ ಮಧುರಾಜ್ ಶೆಟ್ಟಿ, ಅಲ್ಪ ಸಂಖ್ಯಾತ ಘಟಕದ ಮುಖಂಡ ಅಸ್ಲಾಂ, ಸುಭೀತ್ ಎನ್.ಆರ್, ಪ್ರಭಾಕರ ಬಂಗೇರಾ,ಅಣ್ಣಪ್ಪ ನಕ್ರೆ, ದಯಾನಂದ ಬಂಗೇರಾ ಮೊದಲಾದವರು ಪಾಲ್ಗೊಂಡಿದ್ದರು.
