ಕಾರ್ಕಳ ಪುರಸಭೆಯ ಸಾಮಾನ್ಯ ಸಭೆ ಬೀದಿ ಬದಿಗಳಲ್ಲಿ ಮೀನು ವ್ಯಾಪಾರ ನಿಷೇಧಿಸಬೇಕು : ಪುರಸಭೆ ಅಧ್ಯಕ್ಷೆ ಸುಮಕೇಶವ್ ಹೇಳಿಕೆ

ಕಾರ್ಕಳ: ಬೀದಿ ಬದಿಗಳಲ್ಲಿ ಮೀನು ವ್ಯಾಪಾರವನ್ನು ನಿಷೇಧಿಸಬೇಕು, ಇಲ್ಲವೆ ಆಯ್ದ ಜಾಗದಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲು ಅವಕಾಶ ಇದೆ ಎಂದು ಪುರಸಭೆ ಅಧ್ಯಕ್ಷೆ ಸುಮಕೇಶವ್ ಹೇಳಿದ್ದರೆ.ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದರು. ಅಶ್ಪಕ್ ಅಹ್ಮದ್ ಮಾತನಾಡಿ, ಮೀನು ಮಾರಾಟ ವ್ಯವಸ್ಥೆ ಕಲ್ಪಿಸಲು ಅವಕಾಶವಿದೆ ಎಂದರು. ಪ್ರತಿಮಾ ರಾಣೆ ಮಾತನಾಡಿ, ಈ ಬಗ್ಗೆ ಅನೇಕ ಬಾರಿ ಚರ್ಚೆ ನಡೆದಿದೆ. ಹೊಟ್ಟೆಪಾಡಿಗಾಗಿ ಬೀದಿ ಬದಿಯಲ್ಲಿ ವ್ಯಾಪಾರ ನಿರ್ವಹಿಸುತ್ತಿದ್ದಾರೆ. ಪುರಸಭೆಯ ಈ ನಿರ್ಣಯದಿಂದ ತೊಂದರೆಯಾಗಲಿದೆ ಎಂದರು. ಪ್ರಸನ್ನ ದಾನಶಾಲೆ ಮಾತನಾಡಿ, ಬೀದಿ ವ್ಯಾಪಾರಿಗಳನ್ನು ಒಂದೆಡೆ ಸೇರಿಸಿ ವ್ಯಾಪಾರ ನಿರ್ವಹಿಸುವಂತೆ ಕ್ರಮ ಕೈಗೊಂಡಲ್ಲಿ ಅವರವರ ವ್ಯಾಪಾರದಲ್ಲಿ ತೊಂದರೆಯಾಗಲಿದೆ ಎಂದರು.
ಯೋಗೀಶ್ ದೇವಾಡಿಗ ಮಾತನಾಡಿ, ಬೀದಿ ಬದಿಗಳಲ್ಲಿ ಕೊಳಕು ಮಾಡಿ ವ್ಯಾಪಾರ ನಿರ್ವಹಿಸುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ಅದು ಅಧಿಕಾರಿಗಳ ಜವಾಬ್ದಾರಿ ಎಂದರು. ರೆಹಮತ್ ಎನ್.ಶೇಖ್, ಪ್ರದೀಪ್ ಮಾರಿಗುಡಿ, ಶುಭದ ರಾವ್ ಮುಂತಾದವರು ಬೀದಿ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಿ ಎಂದರು. ಎಲ್ಲಾ ಬೀದಿ ಬದಿ ಮೀನು ವ್ಯಾಪಾರಿಗಳನ್ನು ಕರೆಸಿ ಪ್ರತ್ಯೇಕ ಸಭೆ ನಡೆಸೋಣ ಎಂದು ತೀರ್ಮಾನಿಸಲಾಯಿತು. ಅಶ್ಪಕ್ ಅಹ್ಮದ್ ಬಂಡೀಮಠ ಬಸ್ ನಿಲ್ದಾಣದಲ್ಲಿ ಶಲ್ಟರ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಒತ್ತಾಯಿಸಿದರು.

ಅಂಬೇಡ್ಕರ್ ನಿಗಮದಲ್ಲಿ ಮಂಜೂರಾದ ಮನೆಗಳ ಫಲಾನುಭವಿಗಳಿಗೆ ಆದೇಶ ವಿತರಣೆ ವೇಳೆ ಜನಪ್ರತಿನಿಧಿಗಳ ಗಮನಕ್ಕೆ ತರಲಿಲ್ಲ ಎಂದು ಪ್ರತಿಮಾ ಆರೋಪಿಸಿದರು. ಶುಭದ ರಾವ್ ಮಾತನಾಡಿ, ಆಯಾಯ ವಾರ್ಡ್‍ಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆಯ ವೇಳೆ ಸಂಬಂಧಿಸಿದ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಮೀನಾಕ್ಷಿ ಗಂಗಾಧರ್ ಕೂಡಾ ಇದೇ ವಿಚಾರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಒಳಚರಂಡಿ ಕಾಮಗಾರಿ 13 ಕೋಟಿ ರೂ. ವೆಚ್ಚದಲ್ಲಿ ನಡೆದಿದ್ದು, ಈ ಬಗ್ಗೆ ಸಾರ್ವಜನಿಕ ಅಡಿಟ್ ವರದಿ ನೀಡಬೇಕು ಎಂದು ಅಶ್ಪಕ್ ಅಹ್ಮದ್ ಆರೋಪಿಸಿದರು. ಸರಕಾರದ ಸವಲತ್ತು ವಿತರಣೆಯ ಸಂದರ್ಭ ಎಸ್‍ಸಿ/ಎಸ್ಟಿ ಫಲಾನುಭವಿಗಳು ದಾಖಲೆಗನ್ನು ಸಲ್ಲಿಸುವ ವೇಳೆ ತೊಂದರೆಯಾಗುತ್ತಿದ್ದು, ಕಾನೂನನ್ನು ಸಡಿಲಿಕೆ ಮಾಡಿ ಸಹಕರಿಸುವಂತೆ ಶುಭದ ರಾವ್ ಆಗ್ರಹಿಸಿದರು.

ಎಣ್ಣೆಹೊಳೆ ಏತಾ ನೀರಾವರಿ ಕಾಮಗಾರಿಯ ಪ್ರಯುಕ್ತ ನಗರದಲ್ಲಿ ಅಳವಡಿಸಿದ ಪೈಪ್‍ಲೈನ್ ಕಾಮಗಾರಿಗೆ ರಸ್ತೆಯನ್ನು ಅಗೆದು ಹಾಕಲಾಗಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಶೋಕ್ ಸುವರ್ಣ ಒತ್ತಾಯಿಸಿದರು. ಸಾಮಾನ್ಯ ಸಭೆಗೆ ಮೈಕ್ ಕೈಗೊಡುತ್ತಿದ್ದು, ಮುಂದಿನ ಬಾರಿ ಸರಿಪಡಿಸಬೇಕು ಎಂದು ಸಂತೋಷ್ ರಾವ್ ಒತ್ತಾಯಿಸಿದರು.
ಪುರಸಭೆ ಅಧ್ಯಕ್ಷೆ ಸುಮ ಕೇಶವ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪಲ್ಲವಿ, ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೀಶ್ ದೇವಾಡಿಗ, ಮುಖ್ಯಾಧಿಕಾರಿ ರೂಪಾ ಶೆಟ್ಟಿ ಉಪಸ್ಥಿತರಿದ್ದರು.
ಕ್ಯಾಷ್ಯನ್: ಪುರಸಭಾ ಸಾಮಾನ್ಯ ಸಭೆಯ ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಸುಮ ಕೇಶವ್ , ಉಪಾಧ್ಯಕ್ಷೆ ಪಲ್ಲವಿ, ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೀಶ್ ದೇವಾಡಿಗ, ಮುಖ್ಯಾಧಿಕಾರಿ ರೂಪಾ ಶೆಟ್ಟಿ ಉಪಸ್ಥಿತರಿದ್ದರು.