ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕಾರ್ಕಳ ಎಎಸ್ಪಿ ಹಾಗೂ ನಗರ ಠಾಣಾಧಿಕಾರಿ, ಠಾಣಾಧಿಕಾರಿಯವರಿಗೆ ಕಾರ್ಕಳ ತಾಲೂಕಿನಲ್ಲಿ ಸುವ್ಯವಸ್ಥೆ ಯನ್ನು ಕಾಪಾಡುವಂತೆ ಮತ್ತು ಅಕ್ರಮ ವ್ಯವಹಾರಗಳಿಗೆ ಕಡಿವಾಣಕ್ಕೆ ಮನವಿ

ಕರ್ಣಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಘಟಕದ ವತಿಯಿಂದ ಜಿಲ್ಲಾಧ್ಯಕ್ಷರಾದ ಅ. ರಾ. ಪ್ರಭಾಕರ್ ಪೂಜಾರಿ ಅವರ ಆದೇಶದಂತೆ ಕಾರ್ಕಳ ತಾಲೂಕು ಘಟಕದ ವತಿಯಿಂದ ಕಾರ್ಕಳ ಎಎಸ್ಪಿ ಡಾ. ಹರ್ಷಪ್ರಿಯಂವದಾ ಹಾಗೂ
ನಗರ ಠಾಣಾಧಿಕಾರಿಗಳಾದ ಪ್ರಸನ್ನ ಮತ್ತು ಠಾಣಾಧಿಕಾರಿ ಸಂದೀಪ್ ಅವರನ್ನು ಭೇಟಿಯಾಗಿ,ಕಾರ್ಕಳ ತಾಲೂಕಿನಲ್ಲಿ ಸುವ್ಯವಸ್ಥೆ ಯನ್ನು ಕಾಪಾಡುವಂತೆ, ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಕಳ ತಾಲೂಕು ಘಟಕದ ವತಿಯಿಂದ ವಿನಂತಿಸಲಾಯಿತು.


ಈ ಸಂದರ್ಭದಲ್ಲಿ ತಾಲೂಕು ಅದ್ಯಕ್ಷರಾದ ಶೇಕ್ ಇಮ್ರಾನ್ ಕಾಬೆಟ್ಟು ಅವರು ಮತ್ತು ಕ್ಸೇವಿಯರ್ ಗೌರವಾಧ್ಯಕ್ಷರು ಮತ್ತು ರಿಯಾಜ್ ತಾಲೂಕು ಮುಖಂಡರು ಮತ್ತು ನಿಹಾಲ್ ತಾಲೂಕು ಮುಖಂಡರು ಮತ್ತು ಅಕ್ಷತಾ ತಾಲೂಕು ಮುಖಂಡರು ಮತ್ತು ಅಮರ್ ಶೆಟ್ಟಿ ತಾಲೂಕು ಮುಖಂಡರು ಮತ್ತು ವಿನೋದ್ ಪೂಜಾರಿ ತಾಲೂಕು ಮುಖಂಡರು ಮತ್ತು ಶಿಕ್ ಸುಲೇಮಾನ್ ತಾಲೂಕು ಮುಖಂಡರು ಮತ್ತು ಕೃಷ್ಣಾ ಪೂಜಾರಿ ತಾಲೂಕು ಮುಖಂಡರು ಮತ್ತು ಸೈಫ್ ತಾಲೂಕು ಮುಖಂಡರು ಮತ್ತು ಅಮಿತ್ ಕರ್ಕಡ ತಾಲೂಕು ಮುಖಂಡರು ಮತ್ತು ಸಲ್ಮಾನ್ ತಾಲೂಕು ಮುಖಂಡರು ಮತ್ತು ಮತ್ತಿತರರು ಉಪಸ್ಥಿತರಿದ್ದರು.
