ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಎಂ. ಬಿ. ಎ ಪದವಿ ಪರೀಕ್ಷೆಯಲ್ಲಿ ಪ್ರಥಮ Rank ಪಡೆದ ಉಷಾ ನಾಯಕ್

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಕಳೆದ 2023 ರ ಸಾಲಿನಲ್ಲಿ ನಡೆಸಿದ ಅಂತಿಮ ಎಂ. ಬಿ. ಎ ಪರೀಕ್ಷೆಯಲ್ಲಿ ಉಷಾ ನಾಯಕ್ ಇವರು ಪ್ರಥಮ Rank ಹಾಗೂ ನಗದು ಪುರಸ್ಕಾರವನ್ನು ಪಡೆದಿದ್ದಾರೆ.ಬಾಲ್ಯದಿಂದಲೂ ತಂದೆಯ ಆಸೆಯನ್ನು ನೆರವೇರಿಸ ಬೇಕೆಂಬ ಛಲ, ಸತತ ಪ್ರಯತ್ನ, ಆತ್ಮ ವಿಶ್ವಾಸ ಹೊಂದಿರುವ ಈಕೆ ನಗರದ ಕೆನರಾ ಕಾಲೇಜು ಹಾಗೂ ಸಂಧ್ಯಾ ಕಾಲೇಜಿನಲ್ಲಿ ವಾಣಿಜ್ಯ ಹಾಗೂ ನಿರ್ವಹಣಾ ಶಾಸ್ತ್ರದ ಉಪನ್ಯಾಸಕಿಯಾಗಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.ಇವರು ಮೂಡುಬಿದಿರೆ ಒಂಟಿಕಟ್ಟೆಯ ರವೀಂದ್ರ ನಾಯಕ್ ಹಾಗೂ ಜಯಶ್ರೀ ನಾಯಕ್ ರವರ ಹೆಮ್ಮೆಯ ಪುತ್ರಿ.ಇವರು ಯೆನೋಪಯ ಕಾಲೇಜಿನ ನಿರ್ವಹಣಾ ವಿಭಾಗದ ಉಪನ್ಯಾಸಕ ಡಾ. ಪ್ರಶಾಂತ್ ಇವರ ಪತ್ನಿ. ಇದೇ ಬರುವ ಮಾರ್ಚ್ 3 ರಂದು ನಡೆಯಲಿರುವ ವಾರ್ಷಿಕ ಘಟಿಕೋತ್ಸವದಂದು ರಾಜ್ಯಪಾಲರು ಇವರನ್ನು rank ಪ್ರಮಾಣ ಪತ್ರ ಹಾಗೂ ನಗದು ಬಹುಮಾನವನ್ನು ನೀಡಲಿರುವರು.

Related Posts

Leave a Reply

Your email address will not be published.