ಕಟೀಲು: ದಶಾವತಾರ ಯಕ್ಷಗಾನ ಮಂಡಳಿಯಿಂದ 6 ಮೇಳಗಳ ತಿರುಗಾಟ ಆರಂಭ
ಇತಿಹಾಸ ಪ್ರಸಿದ್ದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಳದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ 6 ಮೇಳಗಳ ತಿರುಗಾಟಕ್ಕೆ ದೇವಲಯದಲ್ಲಿ ಪ್ರಥಮ ಸೇವೆಯಾಟದೊಂದಿಗೆ ಪ್ರಾರಂಭವಾಯಿತು.ಈ ವೇಳೆ ದೇವಳದ ಪ್ರಧಾನ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಅವರು ಯಕ್ಷಗಾನ ಕಲಾವಿದರಿಗೆ ಗೆಜ್ಜೆ ಹಸ್ತಾಂತರಿಸಿದರು.ಗೆಜ್ಜೆ ಮುಹೂರ್ತದ ಮೊದಲು ಮೇಳಗಳ ಕಲಾವಿದರಿಂದ ತಾಳಮದ್ದಳೆ ನಡೆಯಿತು ನಂತರ ರಥಬೀದಿಯಲ್ಲಿ ಚೌಕಿ ಪೂಜೆ ನಡೆದು 6 ಮೇಳಗಳಿಂದಲು ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.
ಇನ್ನು ಕಟೀಲು ಮೇಳದಲ್ಲಿ ಭಕ್ತರಿಂದ ನೀಡಲ್ವಟ್ಟ 20ಕ್ಕೂ ಹೆಚ್ಚೂ ಚಿನ್ನದ ಬೇಳ್ಳಿಯ ಕಿರೀಟಗಳು ಇವೆ. ಬೆಳ್ಳಿಯ ತೊಟ್ಟಿಲುಗಳು ಹಾಗೂ ಪ್ರತಿ ಮೇಳದಲ್ಲೂ ಬೇಳಿಯ ಶಂಖ ಚಕ್ರ ಗದೆಗಳು ಇವೆ. ತಿರುಗಾಟದ ಆರಂಭದ ದಿನ ಇವೆಲ್ಲ ಪರಿಕರಗಳಿಗು ಪೂಜೆ ಆಗುತ್ತದೆ.
ಭಕ್ತರು ಯಕ್ಷಗಾನವನ್ನು ಸುಖ ಶಾಂತಿ ನೆಮ್ಮದಿಗಾಗಿ ಹರಕೆಯಾಗಿ. ಯಾವುದೆ ಜಾತಿ ಮತ ಬೇದವಿಲ್ಲದೆ ಅನ್ಯ ಧರ್ಮದವರು ಕೂಡ ಯಕ್ಷಗಾನ ಬಯಲಾಟವನ್ನು ಆಡಿಸುತ್ತಾರೆ. ಕಟೀಲು ದುರ್ಗಾಪರಮೇಶ್ವರಿ ದೇವಿಯು ಯಕ್ಷಗಾನ ನಡೆಯುವಲ್ಲಿಗೆ ಬರುತ್ತಾಳೆ ಎನ್ನುವುದು ಭಕ್ತರ ನಂಬಿಕೆ. ಪತ್ತನಾಜೆಯ ದಿನ ಮೇಳದ ದೇವರು ಮತ್ತೆ ದೇವಾಲಯವನ್ನು ಸೇರುತ್ತಾರೆ. ಇನ್ನೂ ಯಕ್ಷಗಾನದ ಪ್ರದರ್ಶನವು ಸಂಜೆ 5.45 ಕ್ಕೆ ಚೌಕಿ ಪೂಜೆಯೊಂದಿಗೆ ಪ್ರಾರಂಭವಾಗಿ ರಾತ್ರಿ 12ಕ್ಕೆ ಮುಗಿಯುತ್ತದೆ.