ಸಾಬೀತು ಮಾಡದಿದ್ದರೆ ಪಾಕ್‍ಗೆ ಹೋಗಲು ಯತ್ನಾಳ್‍ಗೆ ‘ಹಾಶ್ಮಿ’ ಸವಾಲು
ನನಗೆ ಐಸಿಸ್ ಸಂಪರ್ಕ ಇರುವುದನ್ನು ಸಾಬೀತು ಪಡಿಸಿದರೆ ನಾನು ದೇಶವನ್ನೇ ಬಿಡುತ್ತೇನೆ. ನೀವು ಸಾಬೀತು ಪಡಿಸದಿದ್ದರೆ ಪಾಕಿಸ್ತಾನಕ್ಕೆ ಹೋಗಬೇಕು ಎಂದು ಬಿಜೆಪಿ ಶಾಸಕ ಯತ್ನಾಳರಿಗೆ ವಿಜಯಪುರದ ಹಜರತ್ ಹಾಸಿಂ ಪೀರ ದರ್ಗಾದ ಧರ್ಮಾಧಿಕಾರಿ ಸಯ್ಯದ್ ಮೊಹಮದ್ ತನ್ಸೀರ್ ಹಾಶ್ಮಿ ಸವಾಲು ಹಾಕಿದ್ದಾರೆ.
ಇದೇ ವೇಳೆ ಹಾಶ್ಮಿಯವರು ಕೇಂದ್ರ ಮಂತ್ರಿ ನಿತಿನ್ ಗಡ್ಕರಿ ಮತ್ತು ಕೆಲವು ಬಿಜೆಪಿ ನಾಯಕರ ಜೊತೆಗೆ ಇರುವ ಫೆÇೀಟೋ ಸಹ ಬಹಿರಂಗ ಆಗಿದೆ. ಹಾಶ್ಮಿ ಐಸಿಸ್ ಜನ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರ ಜೊತೆಗಿದ್ದಾರೆ ಎಂದು ಬಿಜೆಪಿ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಹುಯಿಲೆಬ್ಬಿಸಿದ್ದರು. ಹಾಶ್ಮಿ ಮತ್ತು ಯತ್ನಾಳ್ ಕುಟುಂಬದವರು ವಿಜಯಪುರದ ಟೂರಿಸ್ಟ್ ಹೋಟೆಲ್ ಸಹಿತ ಕೆಲವು ಪಾಲುದಾರಿಕೆ ವ್ಯವಹಾರ ನಡೆಸುತ್ತಿರುವುದು ಸಹ ಬೆಳಕಿಗೆ ಬಂದಿದೆ.