ಕಾಪು: ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್‍ಗೆ ಪ್ರಾರ್ಥಿಸಿ ದಂಡತೀರ್ಥ ಮಠದಲ್ಲಿ ನವಗ್ರಹ ಯಾಗ

ಇಸ್ರೋ ನೇತೃತ್ವದಲ್ಲಿ ಉಡಾವಣೆಯಾದ ಚಂದ್ರಯಾನ – 3 ಇದರ ಯಶಸ್ವಿ ಕಕ್ಷೆ ತಲುಪುವಿಕೆಗೆ ಆಶಿಸಿ ಮತ್ತು ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ ಪರ್ಯಾಯ ಉಡುಪಿ ಶ್ರೀ ಕೃಷ್ಣಾಪುರ ಮಠದ ಆಡಳಿತಕ್ಕೊಳಪಟ್ಟಿರುವ ಕಾಪು ದಂಡತೀರ್ಥ ಮಠದಲ್ಲಿ ನವಗ್ರಹ ಯಾಗ ಪುರಸ್ಸರ ಚಂದ್ರಶಾಂತಿ ನಡೆಯಿತು.

ದಂಡತೀರ್ಥ ಮಠದ ಆಡಳಿತ ಮೊಕ್ತೇಸರ ಡಾ. ಸೀತಾರಾಮ್ ಭಟ್ ನೇತೃತ್ವದಲ್ಲಿ, ವೇದ ಮೂರ್ತಿ ನಾಗಭೂಷಣ್ ಭಟ್, ವಾಗೀಶ್ ಭಟ್, ಕ್ಷೇತ್ರದ ಅರ್ಚಕರಾದ ಶ್ರೀನಿವಾಸ್ ಭಟ್ ಪೌರೋಹಿತ್ವದಲ್ಲಿ ನವಗ್ರಹ ಯಾಗ, ಚಂದ್ರಶಾಂತಿ ನಡೆಯಿತು.

Related Posts

Leave a Reply

Your email address will not be published.