ಚುನಾವಣೆ ಮುಗಿದು ರಿಲ್ಯಾಕ್ಸ್ ಮೂಡಿನಲ್ಲಿ ಕೇರಳ ಸ್ಟೋರಿ ವೀಕ್ಷಿಸಿದ ಡಾ. ಭರತ್ ಶೆಟ್ಟಿ ವೈ

ಮಂಗಳೂರು: ಚುನಾವಣೆ ಮುಗಿದು ರಿಲ್ಯಾಕ್ಸ್ ಮೂಡಿನಲ್ಲಿದ್ದ ಶಾಸಕ ಡಾ. ಭರತ್ ಶೆಟ್ಟಿ ವೈ ಅವರು ಗುರುವಾರ ಮಂಗಳೂರಿನ ಲಾಲ್ ಬಾಗಿನಲ್ಲಿರುವ ಭಾರತ್ ಸಿನಿಮಾದಲ್ಲಿ ಕೇರಳ ಸ್ಟೋರಿ ಸಿನಿಮಾವನ್ನು ವೀಕ್ಷಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಿಂದೂ ಸಮಾಜ ಜಾಗೃತ ವಾಗಿರಲು ಕೇರಳ ಸ್ಟೋರಿ ಒಂದು ಉತ್ತಮ ಸಿನಿಮವಾಗಿದೆ.
ನಮ್ಮ ಹಿಂದೂ ಸಂಪ್ರದಾಯ ಧಾರ್ಮಿಕ ನಂಬಿಕೆಗಳ ಮೇಲೆ ಯಾವ ರೀತಿ ಮುಸ್ಲಿಂ ಭಯೋತ್ಪಾದಕರು,ಮುಸ್ಲಿಂ ವತಿಯವಾದಿ ಸಂಘಟನೆಗಳು, ಮುಸ್ಲಿಂ ಮತಾಂದರು ,ಪ್ರೀತಿ ,ಪ್ರೇಮ ಹಾಗೂ ಆಮಿಷಗಳನ್ನು ಒಡ್ಡಿ ಹಿಂದೂ ಯುವತಿರನ್ನು ಮತಾಂತರಗೊಳಿಸಿ ಭಯೋತ್ಪಾದನೆಗೆ, ವೇಶ್ಯಾವಾಟಿಕೆಗೆ ದೂಡುತ್ತಿವೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ ಎಂದು ಖೇದ ವ್ಯಕ್ತಪಡಿಸಿದರಲ್ಲದೆ, ಸರಕಾರ ಕಾನೂನು ಕ್ರಮ ಕೈಗೊಳ್ಳುತ್ತಿದ್ದರೂ,ಇದಕ್ಕೆ ಹಿಂದೂ ಸಮಾಜ ಜಾಗೃತರಾಗುದು ಅಗತ್ಯ ಎಂದರು.ಇದರ ಜತೆಗೆ ಈ ಚಿತ್ರವನ್ನು ಬ್ಯಾನ್ ಮಾಡಿದ
ಹಿಂದೂ ವಿರೋಧಿ ಸರಕಾರದ ನಡೆಯನ್ನು ಟೀಕಿಸಿದರು.
