ಕಾಪು : ಚಲಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಮರ ಬಿದ್ದು ಇಬ್ಬರು ಮೃತ್ಯು

ಚಲಿಸುತ್ತಿದ್ದ ಅಟೋ ರಿಕ್ಷಾವೊಂದಕ್ಕೆ ಮರವೊಂದು ಬಿದ್ದ ಪರಿಣಾಮ ಅಟೋ ರಿಕ್ಷಾ ಪ್ರಯಾಣಿಕರಿಬ್ಬರು ದಾರುಣಾವಾಗಿ ಮೃತಪಟ್ಟ ಘಟನೆ ಕಾಪು ಮಜೂರು ಸ್ವಾಗತ ನಗರ ಬಳಿ ರಾತ್ರಿ ನಡೆದಿದೆ. ಮೃತರು ಶಿರ್ವ ರೈಸ್ ಮಿಲ್ ಬಳಿಯ ಶಾಂತಿಗುಡ್ಡೆ ನಿವಾಸಿ ಪುಷ್ಪಾ ಹಾಗೂ ಅವರ ಮೈದುನ ಎನ್ನಲಾಗಿದೆ. ಕಾಪುವಿನ ಶರೀಫ್ ಎಂಬವರ ಅಟೋ ಏರಿಕೊಂಡು ಮನೆಕಡೆಗೆ ಹೋಗುತ್ತಿದ್ದ ವೇಳೆ ಬೀಸಿದ ಮಳೆಗಾಳಿಗೆ ಮರವೊಂದು ರಸ್ತೆಯಲ್ಲಿ ಸಾಗುತ್ತಿದ್ದ ಅಟೋ ರಿಕ್ಷಾದ ಮೇಲೆರಗಿದೆ.
ಮರಬಿದ್ದ ಪರಿಣಾಮ ಸಂಪೂರ್ಣ ನಜ್ಜಿ ಹೋದ ರಿಕ್ಷಾದೆಡೆಯಲ್ಲಿ ಸಿಲುಕಿದ ಅವರ ಕಳೇಬರವನ್ನು ತೆರವು ಮಾಡಲು ಸ್ಥಳೀಯರು ಬಾರೀ ಶ್ರಮ ವಹಿಸಿದ್ದರು. ಸ್ಥಳಕ್ಕೆ ಅರಣ್ಯ ಇಲಾಖಾ ಅಧಿಕಾರಿಗಳು ಸಹಿತ ಪೊಲೀಸರು ಬಂದು ಬಾರ ಎತ್ತುವ ಯಂತ್ರದ ಮೂಲಕ ಮರವನ್ನು ತೆರವುಗೊಳಿಸಿದ್ದಾರೆ. ಆ ಅಟೋ ರಿಕ್ಷಾದ ಹಿಂಭಾಗದಲ್ಲಿ ಮತ್ತೊಂದು ಅಟೋ ರಿಕ್ಷಾವಿದ್ದು ಅದೃಷ್ಟ ವಶಾತ್ ಯಾವುದೇ ಅಪಾಯವಿಲ್ಲದೆ ಅದಕ್ಕೆ ಅಪಾಯ ಸಂಭವಿಸಿಲ್ಲ
