ದಲಿತ ಮಗು ಮೇಲೆ ಲೈಂಗಿಕ ದೌರ್ಜನ್ಯ ನಡೆದರೂ ಮೌನ : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೃಪಾ ಅಮರ್ ಆಳ್ವ

ವಿಟ್ಲದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಉಡುಪಿಯ ಘಟನೆಯಲ್ಲಿ ಶಾಸಕರು, ಸಂಸದರು ಪ್ರತಿಭಟನೆ ಮಾಡಿದ್ದರು. ಎಬಿವಿಪಿಯವರು ಗೃಹ ಸಚಿವರ ಮನೆಗೆ ಮುತ್ತಿಗೆಯನ್ನು ಕೂಡ ಹಾಕಿದ್ದಾರೆ. ಆದರೆ ವಿಟ್ಲದ ಕೇಸ್‍ನಲ್ಲಿ ಯಾಕೆ ಪ್ರತಿಭಟನೆ ನಡೆಸದೆ ಮೌನವಹಿಸಿದ್ದಾರೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೃಪಾ ಅಮರ್ ಆಳ್ವ ಆರೋಪಿಸಿದರು.

ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ದಲಿತ ಮಗು ಮೇಲೆ ಲೈಂಗಿಕ ದೌರ್ಜನ್ಯ ಆದರೂ ಮಕ್ಕಳ ಆಯೋಗ ಯಾಕೆ ಕ್ರಮ ತೆಗೆದುಕೊಂಡಿಲ್ಲ. ಪ್ರಕರಣದಲ್ಲಿ ಐವರು ಆರೋಪಿಗಳೂ ಹಿಂದೂಗಳೇ ಆಗಿದ್ದಾರೆ. ಮೂಲ್ಕಿ ಪ್ರಕರಣ ಆದಾಗಲೂ ಎಬಿವಿಪಿ, ಬಿಜೆಪಿಯವರು ಯಾಕೆ ಮೌನವಾಗಿದ್ದಾರೆ.

ಬೇರೆ ಧರ್ಮದ ಆರೋಪಿಗಳಾಗಿರುತ್ತಿದ್ದರೆ ಎಲ್ಲರೂ ಬರುತ್ತಿದ್ದರು. ಆರೋಪಿ ಹಿಂದೂ ಆಗಿರುವುದರಿಂದ ಎಲ್ಲರೂ ಬಾಯಿ ಮುಚ್ಚಿ ಕುಳಿತಿದ್ದಾರೆ. ಈಗ ರಾಜಕೀಯ ಮಾಡುವವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಾಗಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶುಭೋದಯ ಅಳ್ವಾ, ಕೋಡಿಜಾಲ್ ಇಬ್ರಾಹಿಂ, ನಜೀರ್ ಬಜಾಲ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.