ಡಿ.29: ತುಳು ಭವನದಲ್ಲಿ ಕುಡ್ಲ ಚಿತ್ರ ದರ್ಶನ ಅನಾವರಣ
ಮಂಗಳೂರು: ಹಿರಿಯ ಪತ್ರಿಕಾ ಛಾಯಾಗ್ರಾಹಕ ಯಜ್ಞ ಅವರು ಕ್ಲಿಕ್ಕಿಸಿದ ಹಳೆಯ ಮಂಗಳೂರು ನಗರದ ಕಪ್ಪು ಬಿಳುಪು ಛಾಯಾಚಿತ್ರಗಳನ್ನು ಮಂಗಳೂರಿನ ತುಳು ಭವನದಲ್ಲಿ ಶಾಶ್ವತವಾಗಿ ಅಳವಡಿಸಲಾಗಿದ್ದು, ಛಾಯಾಚಿತ್ರಗಳ ಅನಾವರಣ ಕಾರ್ಯಕ್ರಮ ಡಿ.29ರ ಸೋಮವಾರ ಸಂಜೆ 4 ಗಂಟೆಗೆ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಅದಾನಿ ಗ್ರೂಪ್ ನ ಕಾರ್ಯನಿರ್ವಾಹಕ ನಿರ್ದೇಶಕ ರುಪನ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಅವರು ನೇರವೇರಿಸುವರು.
ಛಾಯಾಚಿತ್ರಗಳನ್ನು ಅಳವಡಿಸಲಾಗಿರುವ ತುಳು ಭವನದ ಎರಡನೇ ಮಹಡಿಯ ‘ಎಸ್. ಯು. ಪಣಿಯಾಡಿ ತುಳುನಾಡ ಚಾವಡಿ’ ನಾಮಫಲಕವನ್ನು ಮುಡಿಪು ತುಳುನಾಡ ಸಿರಿ ಮ್ಯೂಸಿಯಂ ಸ್ಥಾಪಕ ಡಾ.ಮದನ ಮೋಹನ್ ನಾಯ್ಕ್ ಅನಾವರಣ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ವಹಿಸುವರು.
ಯಜ್ಞ ಅವರು 1970 ರಿಂದ 2000ನೇ ಅವಧಿಯಲ್ಲಿ ಕ್ಲಿಕ್ಕಿಸಿದ ಚಿತ್ರಗಳಲ್ಲಿ 51 ಚಿತ್ರಗಳನ್ನು ಆರ್ಟ್ ಕೆನರಾ ಟ್ರಸ್ಟ್ ಆಯ್ಕೆ ಮಾಡಿ ಅನಾವರಣಕ್ಕೆ ಸಿದ್ಧಗೊಳಿಸಿದೆ.

ಕಾರ್ಯಕ್ರಮದಲ್ಲಿ ಆರ್ಟ್ ಕೆನರಾ ಟ್ರಸ್ಟ್ ಅಧ್ಯಕ್ಷ ಸುಬಾಷ್ ಚಂದ್ರ ಬಸು, ಕಲ್ಲಡ್ಲ ಮ್ಯೂಸಿಯಂ ಸ್ಥಾಪಕ ಕೆ.ಸ್. ಯಾಸಿರ್, ಕಟ್ಟೆಮಾರ್ ಮನೆತನದ ಪ್ರಮುಖರಾದ ಪ್ರಶಾಂತ್ ಕುಮಾರ್ ಕಟ್ಟೆಮಾರು, ಹಿರಿಯ ಪತ್ರಕರ್ತೆ ಅನಿತಾ ಪಿಂಟೋ , ಛಾಯಾಗ್ರಾಹಕ ಯಜ್ಞ, ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ , ಸದಸ್ಯ ಸಂತೋಷ್ ಶೆಟ್ಟಿ ಹಿರಿಯಡ್ಕ ಉಪಸ್ಥಿತರಿರುವರು ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.


















