ಕೊರಗರ ಭೂಮಿ ಸಮಸ್ಯೆ ಮತ್ತು ವಿವಿಧ ಬೇಡಿಕೆ ಆಗ್ರಹಿಸಿ ಧರಣಿ ಸತ್ಯಾಗ್ರಹ

ಕುಂದಾಪುರ: ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಕೊರಗರ ಭೂಮಿ ಸಮಸ್ಯೆ ಹಾಗೂ ವಿವಿಧ ಬೇಡಿಕೆಗೆ ಸಂಬಂಧಪಟ್ಟಂತೆ ನಾಡ ಗ್ರಾಪಂ ಮುಂಭಾಗ ಧರಣಿ ನಡೆಸುತ್ತಿದ್ದು, ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಧರಣಿ ಸತ್ಯಾಗ್ರಹವನ್ನು ಕೈಬಿಟ್ಟಿದ್ದಾರೆ.

ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರ ಸೂಚನೆಯಂತೆ ಸ್ಥಳಕ್ಕೆ ಆಗಮಿಸಿದ ಕುದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ, ಧರಣಿ ನಿರತರಿಗೆ ತಿಳುವಳಿಕೆ ಪತ್ರವನ್ನು ನೀಡಿದರು. ಕೊರಗರ ವಿವಿಧ ಬೇಡಿಕೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜು.5ರಂದು ಬೆಳಗ್ಗೆ 11ಗಂಟೆಗೆ ಸಭೆ ನಡೆಸಲು ದಿನಾಂಕ ನಿಗದಿ ಪಡಿಸಿ ಈ ಮೂಲಕ ಸಮುದಾಯದ ಮುಖಂಡರಿಗೆ ಸೂಚಿಸಲಾಗಿದೆ.

ಆ ಮೂಲಕ ಮುಷ್ಕರವನ್ನು ಕೈಬಿಡುವಂತೆ ಕೋರಿದೆ ಎಂದು ತಿಳುವಳಿಕೆ ಪತ್ರದಲ್ಲಿ ನಮೂದಿಸಲಾಗಿತ್ತು. ಬಳಿಕ ಅಧಿಕಾರಿಗಳು ಮುಖಂಡರ ಮನವೊಲಿಸಿ ಮುಷ್ಕರ ಕೈಬಿಡುವಂತೆ ಮನವಿ ಮಾಡಿದರು. ಅದರಂತೆ ಕೊರಗ ಸಂಘಟನೆಗಳ ಮುಖಂಡರು ಧರಣಿ ಯನ್ನು ಸಂಜೆ ವೇಳೆ ವಾಪಾಸ್ಸು ಪಡೆದುಕೊಂಡರು.

Related Posts

Leave a Reply

Your email address will not be published.