ಭಾರತೀಯ ವಾಯುಪಡೆಯ ಸಾರಿಗೆ ದಳದ ಪೈಲಟ್ ಮನಿಷಾ ಶೆಟ್ಟಿಯವರಿಂದ ಉಪನ್ಯಾಸ
ಅಮೃತ ವಿದ್ಯಾಲಯಂನಲ್ಲಿ ವಿದ್ಯಾರ್ಥಿಗಳ ನ್ನು ಬಹುಮುಖಿ ಪ್ರತಿಭಾನ್ವಿತರನ್ನಾಗಿ ಬೆಳೆಸುವ ದೃಷ್ಟಿಯಿಂದ ಹಲವು ರೀತಿಯ ನೂತನ ತಂತ್ರಜ್ಞಾನ ಆಧಾರಿತ ಶಿಕ್ಷಣ ವ್ಯವಸ್ಥೆಗಳ ಮೂಲಕ ಉನ್ನತ ಮಟ್ಟದ ತರಬೇತಿಗಳನ್ನು ಹಮ್ಮಿಕೊಳ್ಳಲಾಗತ್ತಿದೆ.
ಇಂತಹ ನಿರಂತರ ತರಬೇತಿಗಳ ಅಂಗವಾಗಿ ಮಂಗಳವಾರ ಅಮೃತ ವಿದ್ಯಾಲಯಂ ನ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ಕಲ್ಪಿಸ ಲ್ಲ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಯಶಸ್ವೀ ವ್ಯಕ್ತಿಗಳಿಂದ ಉಪನ್ಯಾಸ ನೀಡುವ ಕಾರ್ಯ ಮಾಡಲಾಗುತ್ತದೆ.
ಆ ಪ್ರಯುಕ್ತ ಮಂಗಳವಾರ ದಿನಾಂಕ 9 ರಂದು ಭಾರತೀಯ ವಾಯು ಪಡೆಯ ಸಾರಿಗೆ ದಳ( ಡೋನಿಯರ್ ವಿಮಾನದ) ಪೈಲಟ್ ಮನಿಷಾ ಶೆಟ್ಟಿ ಇವರಿಂದ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.
ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ತಮ್ಮ ವಾಯುಪಡೆಯ ಅನುಭವಗಳನ್ನು ಹಂಚಿಕೊಳ್ಳಲಿರುವರು.
ಅಮೃತ ವಿದ್ಯಾಲಯಂ ವಿದ್ಯಾರ್ಥಿಗಳ ಜ್ಞಾನವಿಕಾಸದ ದೃಷ್ಟಿಯಿಂದ ಮನಿಷಾ ಶೆಟ್ಟಿಯವರಿಯವರ ಈ ಉಪನ್ಯಾಸವು ಭವಿಷ್ಯದ ಉಪಯುಕ್ತವೆನಿಸಲಿದೆ.


















