ಹಿರಿಯ ನಾಗರಿಕರ ಜೀವನದ ಆದರ್ಶಗಳನ್ನು ಗೌರವಿಸೋಣ – ರೋ. ದಿನೇಶ್ ಎಲ್ ಬಂಗೇರ

ತೋಕೂರು: ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಮೈ ಭಾರತ್ ದಕ್ಷಿಣ ಕನ್ನಡ, ಮತ್ತು ರೋಟರಿ ಕ್ಲಬ್ ಬೈಕಂಪಾಡಿ ಜಂಟಿ ಆಶ್ರಯದಲ್ಲಿ, ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಮಹಿಳಾ ಮಂಡಲ10ನೇ ತೋಕೂರು ಹಳೆಯಂಗಡಿ ಹಾಗೂ ರೋಟರಿ ಸಮುದಾಯದಳ 10ನೇ ತೋಕೂರು ಪ್ರಾಯೋಜಕತ್ವದಲ್ಲಿ
ಅಂತರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಫೇಮಸ್ ಯೂತ್ ಕ್ಲಬ್ಬಿನ ಪರಿಸರದಲ್ಲಿರುವ ಹಿರಿಯ ನಾಗರಿಕರ ಮನೆ ಮನೆಗೆ ತೆರಳಿ ಹಣ್ಣು ಹಂಪಲುಗಳನ್ನು ವಿತರಿಸಿ ಹಿರಿಯ ನಾಗರಿಕರನ್ನು ಗೌರವಿಸುವ ಮೂಲಕ ನೆರವೇರಿಸಲಾಯಿತು. ಕಾರ್ಯಕ್ರಮಕ್ಕೆ ರೋಟರಿ ಕ್ಲಬ್ ಬೈಕಂಪಾಡಿ ಅಧ್ಯಕ್ಷರಾದ ರೋ. ದಿನೇಶ್ ಎಲ್ ಬಂಗೇರ ಚಾಲನೆಯನ್ನು ನೀಡಿ ಹಿರಿಯ ನಾಗರಿಕರ ಜೀವನದ ಆದರ್ಶಗಳನ್ನು ಗೌರವಿಸೋಣ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು, ಕಾರ್ಯಕ್ರಮದಲ್ಲಿ ಫೇಮಸ್ ಯೂತ್ ಕ್ಲಬ್ಬಿನ ಗೌರವಾಧ್ಯಕ್ಷರಾದ ಶ್ರೀ ಗುರುರಾಜ್ ಎಸ್ ಪೂಜಾರಿ, ಅಧ್ಯಕ್ಷರಾದ ಶ್ರೀ ಸಂಪತ್ ಜೆ ಶೆಟ್ಟಿ , ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಪ್ರೇಮಲತಾ ಯೋಗೀಶ್ ರೋಟರಿ ಸಮುದಾಯದಳದ ಅಧ್ಯಕ್ಷರಾದ ಶ್ರೀ ಮಹಮ್ಮದ್ ಶರೀಫ್ ಸಂಸ್ಥೆಯ ಕಾರ್ಯದರ್ಶಿ ಶ್ರೀ ಮೋಹನ್ ದಾಸ್ ದೇವಾಡಿಗ, ಸಂಸ್ಥೆಯ ಹಿರಿಯ ಮಾರ್ಗದರ್ಶಕರಾದ ಶ್ರೀ ದಿನಕರ್ ಸಾಲ್ಯಾನ್, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಭಾಸ್ಕರ್ ಅಮೀನ್ ತೋಕೂರು, ನಿಕಟಪೂರ್ವ ಕಾರ್ಯದರ್ಶಿ ಶ್ರೀ ಹಿಮಕರ್, ಫೇಮಸ್ ಯೂತ್ ಕ್ಲಬ್ ಮಹಿಳಾ ಮಂಡಲದ ಉಪಾಧ್ಯಕ್ಷರಾದ ಅಮಿತಾ ದಿನಕರ್ ಸಾಲ್ಯಾನ್, ಸದಸ್ಯರಾದ ಕುಮಾರಿ ಅರ್ಚನಾ ಮತ್ತು ಶ್ರೀಮತಿ ಪುಷ್ಪರವರು ಉಪಸ್ಥಿತರಿದ್ದರು.

ಸರ್ವಧರ್ಮ ಸಮನ್ವಯತೆಯನ್ನು ಸಾರುವ ದೃಷ್ಟಿಕೋನದಲ್ಲಿ ತೋಕೂರು, ಸುಬ್ರಹ್ಮಣ್ಯ ನಗರ, ಓಂಕಾರೇಶ್ವರಿ ನಗರ ಮತ್ತು ಕಲ್ಲಾಪು ಗ್ರಾಮದ ಸರ್ವಧರ್ಮದ ಒಟ್ಟು 10 ಹಿರಿಯ ನಾಗರಿಕರ ಮನೆಗಳಿಗೆ ತೆರಳಿ ಸಂಸ್ಥೆಯ ವತಿಯಿಂದ ಹಣ್ಣು ಹಂಪಲುಗಳನ್ನು ವಿತರಣೆ ಮಾಡಿ ಗೌರವಿಸಿ ಆಶೀರ್ವಾದವನ್ನು ಪಡೆದುಕೊಳ್ಳಲಾಯಿತು

Related Posts

Leave a Reply

Your email address will not be published.