ಉಡುಪಿ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಪೂರ್ಣ ಸಹಕಾರ-ಯಶ್ಪಾಲ್ ಸುವರ್ಣ

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಕಾರದಲ್ಲಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ರಿ. ಉಡುಪಿ ಆಶ್ರಯದಲ್ಲಿ ವೈದ್ಯರ ದಿನಾಚರಣೆ ಪ್ರಯುಕ್ತ ಉಡುಪಿಯ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಶಾಖೆಯಲ್ಲಿ ಜಿಲ್ಲೆಯ ಹಿರಿಯ ವೈದ್ಯ ದಂಪತಿಗಳಿಗೆ ಹಾಗು ವೈದ್ಯರಿಗೆ ಗೌರವ ಪುರಸ್ಕಾರ -೨೦೨೩ ನೀಡಿ ಗೌರವಿಸಲಾಯಿತು.

ಉಡುಪಿ ಜಿಲ್ಲೆಯ ಪ್ರಸಿದ್ಧ ವೈದ್ಯ ದಂಪತಿಗಳಾದ ಡಾ. ಹoಗ್ಳೂರು ರಾಘವೇಂದ್ರ ಹೆಬ್ಬಾರ್ ಹಾಗೂ ಡಾ. ಪುಷ್ಪಗಂಧಿನಿ, ಕಾರ್ಕಳದ ಡಾ. ಕೆ ಆರ್ ಜೋಶಿ ಹಾಗೂ ಡಾ. ರೇಣುಕಾ ಆರ್. ಜೋಶಿ, ಹಿರಿಯ ವೈದ್ಯರುಗಳಾದ ಉಡುಪಿಯ ಪ್ರೊ. ಎ. ರಾಜ, ಡಾ. ಎನ್. ಆರ್. ರಾವ್, ಕುಂದಾಪುರದ ಡಾ. ರಂಜಿತ್ ಕುಮಾರ್ ಶೆಟ್ಟಿ, ಉಡುಪಿಯ ಡಾ. ಡೊನಾಲ್ಡ್ ಸೈಮನ್ಸ್ ಇವರನ್ನು ಗೌರವ ಪುರಸ್ಕಾರ -೨೦೨೩ ನ್ನು ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸನ್ಮಾನಿತರನ್ನು ಗೌರವಿಸಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡುತ್ತಾ ಮುಂದಿನ ಎರಡು ವರ್ಷದಲ್ಲಿ ಉಡುಪಿ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗುವ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡುತ್ತೇನೆ, ವೈದ್ಯರು ದೇವರಿಗೆ ಸಮಾನ ಅವರ ಕೆಲಸ ಶ್ಲಾಘನೀಯ ಎಂದರು.

ಸಮಾರಂಭದಲ್ಲಿ ಉಡುಪಿ ಕರಾವಳಿ ಐಎಂಎ ಅಧ್ಯಕ್ಷ ಡಾ ಪಿ.ವಿ ಭಂಡಾರಿ ಮಾತನಾಡುತ್ತಾ ಸಮಾಜದಲ್ಲಿ ವೈದ್ಯರನ್ನು ನೋಡುವಂತಹ ದೃಷ್ಟಿಕೋನ ಬದಲಾಗಬೇಕು ಆಸ್ಪತ್ರೆಗಳಲ್ಲಿ ನಡೆಯುವ ರೋಗಿಗಳ ಸಾವಿಗೆ ವೈದ್ಯರ ನಿರ್ಲಕ್ಷ ಕಾರಣ ಎನ್ನುವ ಹಣೆಪಟ್ಟಿ ಕಟ್ಟುವುದು ಸರಿಯಲ್ಲ ಎಂದರು .

ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣಿ, ಅಧ್ಯಕ್ಷ ಪ್ರೊ. ಶಂಕರ್, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ, ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಉಡುಪಿ ಶಾಖೆಯ ಉಪ ವ್ಯವಸ್ಥಾಪಕ ಪುರಂದರ ತಿಂಗಳಾಯ, ಸಮಾರಂಭದ ಸಂಚಾಲಕ ವಿಘ್ನೇಶ್ವರ ಅಡಿಗ , ಬೈಂದೂರು ಕಸಾಪ ಅಧ್ಯಕ್ಷ ಡಾ. ರಘು ನಾಯ್ಕ ಉಪಸ್ಥಿತರಿದ್ದರು. ಮಧುಸೂದನ್ ಹೇರೂರು, ಸತೀಶ್ ಕೊಡವೂರು ಸನ್ಮಾನಿತರನ್ನು ಪರಿಚಯಿಸಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು

Related Posts

Leave a Reply

Your email address will not be published.