ಮಲ್ಪೆ ಬೀಚ್ ದುರಂತ ತಕ್ಷಣ ನುರಿತ ಲೈಫ್ ಗಾರ್ಡ್ ಗಳನ್ನು ಜಿಲಾಡಳಿತ ಮೂಲಕ ತರಬೇತಿ ನೀಡಿ ನೇಮಿಸುವಂತೆ ಜಿಲ್ಲಾಧಿಕಾರಿಯವರಿಗೆ ಮೀನುಗಾರ ಮುಖಂಡ ವಿಶ್ವಾಸ್ ವಿ ಅಮೀನ್ ಮನವಿ

ನಿನ್ನೆ ಮಲ್ಪೆ ಬೀಚ್ ನಲ್ಲಿ ಪ್ರವಾಸಿಗರು ಸಮುದ್ರದಲ್ಲಿ ಈಜಲು ಹೋಗಿ ಸಮುದ್ರ ಪಾಲಾಗಿದ್ದು ಇಬ್ಬರು ಮೃತ ಪಟ್ಟಿದ್ದು ಒಬ್ಬ ಪ್ರವಾಸಿಗ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು . ಈ ಬಗ್ಗೆ ಮಾದ್ಯಮದಲ್ಲಿ ಹಾಗೂ ಸಾರ್ವಜನಿಕ ವಾಗಿ ಜಿಲ್ಲಾಡಳಿತದ ನಿರ್ಲಕ್ಷ್ಯ ಎಂಬ ಮಾತು ಕೇಳಿಬರುತ್ತಿದ್ದು ಇದಕ್ಕೆ ಪ್ರಮುಖ ಕಾರಣ ಕನಿಷ್ಠ ಈಜಲು ಬರದ ಮೂರು ಲೈಫ್ ಗಾರ್ಡ್ ಗಳು ಸ್ಥಳದಲ್ಲಿ ಇದ್ದು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರನ್ನು ನಿಯಂತ್ರಿಸಲು ಅಥವಾ ಯಾವುದೇ ಅವಗಡ ಸಂಭವಿಸಿದಾಗ ರಕ್ಷಿಸಲು ಅಸಾಧ್ಯ ವಾದ ಕಾರಣ ತಕ್ಷಣ ಜಿಲ್ಲಾಡಳಿತದ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಕೇಳಿಕೊಂಡಿರ ಬೇಕು. ವಿಶ್ವ ಪ್ರಸಿದ್ಧ ಮಲ್ಪೆ ಬೀಚ್ ನಲ್ಲಿ ಈಜು ಬಾರದ ಲೈಫ್ ಗಾರ್ಡ್ ಗಳನ್ನು ನೇಮಿಸಿರುವುದರ ಕಾರಣ ಏನು ಎಂಬ ಯಕ್ಷ ಪ್ರಶ್ನೆಯು ಮೂಡಿದ್ದು ಇದರ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳಬೇಕಾಗಿ ಆಗ್ರಹಿಸಿರುತ್ತಾರೆ. ಮಲ್ಪೆ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ಪ್ರಮುಖ ಬೀಚ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ನುರಿತ ಲೈಫ್ ಗಾರ್ಡ್ ಗಳನ್ನು ಅತೀ ಶೀಘ್ರದಲ್ಲೇ ನೇಮಿಸಬೇಕಾಗಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ ಕೆ ಯವರಲ್ಲಿ ಕೋರಿರುತ್ತಾರೆ.

Malpe Beach

Related Posts

Leave a Reply

Your email address will not be published.