ಮಲ್ಪೆ: ಸಮುದ್ರ ತೀರದ ತೊಟ್ಟಂ:ಸಮುದ್ರದ ರಭಸಕ್ಕೆ ಮಗುಚಿ ಬಿದ್ದ ದೋಣಿ ನಾಲ್ವರು ಮೀನುಗಾರರು ಪ್ರಾಣಾಪಾಯದಿಂದ ಪಾರು

ಉಡುಪಿ ಜಿಲ್ಲೆಯ ಮಲ್ಪೆಯ ಸಮುದ್ರ ತೀರದ ತೊಟ್ಟಂ ಬಳಿ ಸಮುದ್ರದ ರಭಸಕ್ಕೆ ದೋಣಿ ಮಗಚಿ ಬಿದ್ದಿದ್ದು, ಏಡಿಬಲೆಗೆ ಹೋದ ನಾಲ್ವರು ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತೊಟ್ಟಂ ವಾರ್ಡಿನ ನಗರ ಸಭಾ ಸದಸ್ಯರಾದ ಯೋಗೇಶ್ ರವರು ಈಶ್ವರ್ ಮಲ್ಪೆ ತಂಡಕ್ಕೆ ಮಾಹಿತಿ ನೀಡಿದ್ದು, ಸ್ಥಳಿಯರಾದ ಪ್ರವೀಣ್, ಉದಯ್ ಯವರ ಜೊತೆ ಸೇರಿ ಲೈಫ್ ಜಾಕೇಟ್ ನೀಡಿ ನಾಲ್ಕುರು ಮೀನುಗಾರರ ಜೀವ ಉಳಿಸಲಾಗಿದೆ ಎಂದು ಮುಳುಗು ತಜ್ಞ ಈಶ್ವರ್ ಮಲ್ಪೆ ತಿಳಿಸಿದ್ದಾರೆ. ಕ್ಷಣ ಕ್ಷಣಕ್ಕೂ ಮಲ್ಪೆಯ ಕಡಲು ಉಕ್ಕೇರಿ ಪ್ರಭುದ್ದವಾಗಿರುತ್ತದೆ. ಈಜು ಬರುತ್ತದೆ ಎಂದು ಹೇಳಿ ಯಾರೂ ಸಹ ನೀರಿಗೆ ಇಳಿಯಬೇಡಿ. ಯಾವ ಕ್ಷಣದಲ್ಲಿ ಅಲೆಗಳು ಮೇಲುಕ್ಕಿ ಬರುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಎಲ್ಲಾ ಮೀನುಗಾರರು ಲೈಫ್ ಜಾಕೇಟ್ ಹಾಕಿಯೇ ಮೀನುಗಾರಿಕೆಗೆ ಹೋಗಿ ಎಂದು ಈಶ್ವರ್ ಮಲ್ಪೆ ಹೇಳಿದ್ದಾರೆ.

add - S.L Shet ..march 2025

Related Posts

Leave a Reply

Your email address will not be published.