ಮಂಜೇಶ್ವರ :ಏಮ್ಸ್ ಪ್ರೊಪೋಸಲ್ ಪಟ್ಟಿಯಲ್ಲಿ ಕಾಸರಗೋಡು ಹೆಸರನ್ನು ಒಳಪಡಿಸಬೇಕು- ಉಪವಾಸ ಸತ್ಯಾಗ್ರಹ
ಮoಜೇಶ್ವರ: ಕೇರಳ ಸರಕಾರ ಕೇಂದ್ರ ಸರಕಾರಕ್ಕೆ ನೀಡಲಿರುವ ಏಮ್ಸ್ ಪ್ರೊಪೋಸಲ್ ಪಟ್ಟಿಯಲ್ಲಿ ಕಾಸರಗೋಡು ಜಿಲ್ಲೆಯ ಹೆಸರನ್ನು ಕೂಡಾ ಒಳಪಡಿಸಬೇಕೆಂದು ಆಗ್ರಹಿಸಿ ತಿರುವನಂತಪುರ ಸೆಕ್ರಟರಿಯೇಟ್ ಮುಂಭಾಗದಲ್ಲಿ ಸಾಮಾಜಿಕ ಹೋರಾಟಗಾರ್ತಿ ದಯಾ ಬಾಯ್ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮುಸ್ಲಿಂ ಯೂತ್ ಲೀಗ್ ಮಂಜೇಶ್ವರ ಪಂಚಾಯತ್ ಸಮಿತಿಯ ವತಿಯಿಂದ ಆಹೋ ರಾತ್ರಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಯಿತು

ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಸತ್ಯಾಗ್ರಹವನ್ನು ಉದ್ಘಾಟಿಸಿದರು. ಯೂತ್ ಲೀಗ್ ಮಂಜೇಶ್ವರ ಪಂಚಾಯತು ಅಧ್ಯಕ್ಷ ಹನೀಫ್ ಕುಚ್ಚಿಕ್ಕಾಡ್ ಅಧ್ಯಕ್ಷತೆ ವಹಿಸಿದರು. ಬೆಳಿಗ್ಗೆ 10.30ಕ್ಕೆ ಆರಂಭಗೊAಡ ಸತ್ಯಾಗ್ರಹ ರಾತ್ರಿ 12 ರ ಸುಮಾರಿಗೆ ಸಮಾಪ್ತಿಗೊಂಡಿತು. ಮುಸ್ಲಿಂ ಲೀಗ್ ವಲಯ ಕಾರ್ಯದರ್ಶಿ ಎಂ ಅಬ್ಬಾಸ್, ಜಿಲ್ಲಾ ಕಾರ್ಯದರ್ಶಿ ಅಝೀಝ್ ಮರಿಕೆ , ಎ ಕೆ ಆರಿಫ್, ಯೂತ್ ಲೀಗ್ ಜಿಲ್ಲಾ ಉಪಾಧ್ಯಕ್ಷ ಮುಕ್ತಾರ್ ಎ., ಯೂತ್ ಲೀಗ್ ನೇತಾರ ಮುಸ್ತಫ ಉದ್ಯಾವರ, ಸೈಪುಲ್ಲಾ, ಮುಬಾರಕ್ ಗುಡ್ದಕ್ಕೇರಿ, ರಿಯಾಝ್ ಮೌಲಾನಾ ಮೊದಲಾದವರು ಪ್ರತಭಟನೆಯಲ್ಲಿ ಪಾಲ್ಗೊಂಡಿದ್ದರು.



















