ಮಂಗಳೂರು: ದಕ್ಷಿಣ ಕನ್ನಡದಲ್ಲಿ ಮಹಿಳಾ ಶಕ್ತಿ ಪಯಣ ಹೆಚ್ಚಳ
ಮಂಗಳೂರು ಮತ್ತು ಪುತ್ತೂರು ವಿಭಾಗದ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಶಕ್ತಿ ಯೋಜನೆಯ ಅನುಕೂಲ ಪಡೆದು 7 ತಿಂಗಳಲ್ಲಿ ಪಯಣಿಸಿದ ಮಹಿಳೆಯರಿಗೆ 2.8 ಕೋಟಿ ಟಿಕೆಟ್ ನೀಡಿಕೆ ಆಗಿದೆ.
ಈ ಟಿಕೆಟ್‌ಗಳ ಒಟ್ಟು ದರ 9.15 ಕೋಟಿ ರೂಪಾಯಿ. ಆರಂಭದ ಜೂನ್ ತಿಂಗಳಿನಲ್ಲಿ 20,87,658 ಇದ್ದ ಟಿಕೆಟ್ ನೀಡಿಕೆ ಹೆಚ್ಚುತ್ತ ಬಂದಿದ್ದು ಜನವರಿ ತಿಂಗಳಲ್ಲಿ ತಿಂಗಳು ಮುಗಿಯುವುದಕ್ಕೆ ಮೊದಲೆ 26,96,261ತಲುಪಿದೆ.