ಮಂಗಳೂರು: ಜೆರೂಸಾ ಶಾಲೆ ಪ್ರಕರಣ, ಜಾಲ ತಾಣ ಅಪಪ್ರಚಾರ : ಸೆನ್ ಠಾಣೆಗೆ ದೂರು ನೀಡಿದ ಮಾಜೀ ಕೌನ್ಸಿಲರ್ ಅಪ್ಪಿ
ಮಂಗಳೂರು ವೆಲೆನ್ಸಿಯಾದ ಜೆರೂಸಾ ಶಾಲೆಯ ಪ್ರಕರಣ ಸಂಬಂಧವಾಗಿ ಕೆಲವರು ಜಾಲ ತಾಣಗಳ ಮೂಲಕ ಸಮಾಜದ ನೆಮ್ಮದಿ ಕೆಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಾಜೀ ಕೌನ್ಸಿಲರ್ ಅಪ್ಪಿ ಅವರು ಸೆನ್ ಠಾಣೆಗೆ ದೂರು ನೀಡಿದರು.
ವಾಟ್ಸ್ ಆ್ಯಪ್ ವಾಯ್ಸ್ ಮೆಸೇಜ್, ತಿರುಚಿದ ಫೋಟೋ ಮೆಸೇಜ್ ಎಂದು ಹರಿದಾಡುತ್ತಿವೆ. ವೈರಲ್ ಆಗುತ್ತಿರುವ ಇವು ಸಮಾಜದಲ್ಲಿ ಅಶಾಂತಿ ಉಂಟು ಮಾಡುವ, ಗಲಭೆ ಎಬ್ಬಿಸುವ ಉದ್ದೇಶದಿಂದ ಕೂಡಿವೆ. ಕೂಡಲೆ ಇವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಪ್ಪಿ ಅವರು ದೂರು ನೀಡಿದ್ದಾರೆ.