ಮಂಗಳೂರು:ಕರಾವಳಿಯಾದ್ಯಂತ ನೆತ್ತೆರೆಕೆರೆ ತುಳು ಸಿನಿಮಾ ಬಿಡುಗಡೆ

ಅಸ್ತ್ರ ಪ್ರೊಡಕ್ಷನ್ ಲಾಂಛನದಲ್ಲಿ ಸ್ವರಾಜ್ ಶೆಟ್ಟಿ ನಿದೇರ್ಶನದಲ್ಲಿ ಲಂಚುಲಾಲ್ ಕೆ ಎಸ್ ನಿರ್ಮಾಣದಲ್ಲಿ ತಯಾರಾದ “ನೆತ್ತೆರೆಕೆರೆ ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ತೆರೆಕಂಡಿತು. ನಗರದ ಭಾರತ್ ಸಿನಿಮಾಸ್‌ನಲ್ಲಿ ನಟ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನೆತ್ತೆರೆಕೆರೆ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಲಿ ಎಂದರು.

ಪತ್ರಕರ್ತರು ಮತ್ತು ಸಿನಿಮಾ ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ್ ಅವರು ಮಾತನಾಡಿ, ತುಳುವಿನಲ್ಲಿ ವಿಭಿನ್ನ ಮತ್ತು ಮಾಸ್ ಸಿನಿಮಾ ನೆತ್ತೆರೆಕೆರೆ ಈ ಸಿನಿಮಾ ಈ ಸಿನಿಮಾವನ್ನು ಪ್ರೋತ್ಸಾಹಿಸಿ ಎಂದರು.ನಟ ಪೃಥ್ವಿ ಅಂಬರ್ ಅವರು ಮಾತನಾಡಿ, ಲಂಚುಲಾಲ್ ಅವರ ನಿರ್ಮಾಣದಲ್ಲಿ ವಿಭಿನ್ನ ಸಿನಿಮಾ ಮೂಡಿಬಂದಿದೆ. ಸ್ವರಾಜ್ ಶೆಟ್ಟಿ ಅವರ ನಟನೆ ಮತ್ತು ನಿರ್ದೇಶನದ ಸಿನಿಮಾ. ಈ ಸಿನಿಮಾವು ಯಶಸ್ಸು ಕಾಣಲಿ ಎಂದು ಹಾರೈಸಿದರು.

ಕಿರಿಕ್ ಕೀರ್ತಿ ಅವರು ಅವರು ಮಾತನಾಡಿ ನೆತ್ತೆರೆಕೆರೆ ಸಿನಿಮಾಕ್ಕೆ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಅಸ್ತ್ರ ಪ್ರೊಡಕ್ಷನ ಸಿಇಒ ಲಂಚುಲಾಲ್ ಕೆ.ಎಸ್. ಇಸ್ಮಾಯಿಲ್ ಮೂಡುಶೆಡ್ಡೆ, ವಿ4 ನ್ಯೂಸ್‌ನ ಆಡಳಿತ ನಿರ್ದೇಶಕರಾದ ಲಕ್ಷ್ಮಣ್ ಕುಂದರ್, ಜಗನ್ನಾಥ್ ಶೆಟ್ಟಿ ಬಾಳಾ, ನಟ ಸ್ವರಾಜ್ ಶೆಟ್ಟಿ, ಎ.ಕೆ. ವಿಜಯ ಕೋಕಿಲಾ, ನಟ ಸ್ವರಾಜ್ ಶೆಟ್ಟಿ, ನಟಿ ದಿಶಾಲಿ ಪೂಜಾರಿ ಸೇರಿದಂತೆ ಸಿನಿಮಾ ತಂಡದವರು ಉಪಸ್ಥಿತರಿದ್ದರು.

add - S.L Shet ..march 2025

Related Posts

Leave a Reply

Your email address will not be published.