ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಜೀವವಿಜ್ಞಾನ ಉತ್ಸವ – ಬಯೋಸಿನರ್ಜಿ 2025-ಎನ್.ಎಂ.ಸಿ ಜೀವ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಹಲವು ಬಹುಮಾನಗಳು
                                                ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ಜೀವ ವಿಜ್ಞಾನ ಪದವಿ ವಿಭಾಗದ ವಿದ್ಯಾರ್ಥಿಗಳು ಏಪ್ರಿಲ್ 28 ಸೋಮವಾರದಂದು ಮಂಗಳೂರು ವಿಶ್ವವಿದ್ಯಾನಿಲಯದ ಜೀವ ವಿಜ್ಞಾನ ಸ್ನಾತಕೋತ್ತರ ವಿಭಾಗಗಳು ಆಯೋಜಿಸಿದ “ಬಯೋಸಿನರ್ಜಿ 2025” ವಿ.ವಿ.ಮಟ್ಟದ ಅಂತರ ಕಾಲೇಜು ವಿಜ್ಞಾನ ಉತ್ಸವದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಯನ್ನು ಪಡೆದುಕೊಂಡರು.

ಕಾಲೇಜಿನ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ರಸಾಯನ ಶಾಸ್ತ್ರ ವಿಭಾಗಗಳನ್ನು ಒಳಗೊಂಡ 16 ವಿದ್ಯಾರ್ಥಿಗಳ ತಂಡ ಭಾಗವಹಿಸಿದ್ದು, ಮುಖ ವರ್ಣಚಿತ್ರ ಸ್ಪರ್ಧೆಯಲ್ಲಿ ತೇಜಸ್ ಮತ್ತು ಶಶಾಂಕ್ ದ್ವಿತೀಯ, ಬೆಂಕಿ ರಹಿತ ಅಡುಗೆ ಸ್ಪರ್ಧೆಯಲ್ಲಿ ಕೀರ್ತಿಕಾ ಯು.ಎಸ್, ಬಿಂದುಶ್ರೀ ಮತ್ತು ಮನಸ್ವಿನಿ ದ್ವಿತೀಯ, ಔಷಧೀಯ ಸಸ್ಯಗಳ ವಿವರಣೆ ಸ್ಪರ್ಧೆಯಲ್ಲಿ ವಿಜಯಲಕ್ಷ್ಮಿ ತೃತೀಯ, ಜೀವವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಗೌತಮ್ ಮತ್ತು ಸಾನಿಧ್ಯ ತೃತೀಯ ಬಹುಮಾನ ಪಡೆದುಕೊಂಡರು. ಜೊತೆಗೆ ವಿದ್ಯಾರ್ಥಿಗಳಾದ ಕಾರ್ತಿಕ್, ಚೈತ್ರ, ಅಕ್ಷತಾ, ಕೀರ್ತಿಕಾ ಎಂ.ಕೆ, ಜೀಷ್ಮಾ, ಲಿಖಿತ್ ರಾಜ್, ಸಿಂಚನ ಮತ್ತು ಕೀರ್ತನ್ ಭಾಗವಹಿಸಿ ಪ್ರಾರಂಭದ ತಂಡ ಪರಿಚಯ ಸ್ಪರ್ಧೆ ಕಿರುನಾಟಕದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡರು.
ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕುಲದೀಪ್ ಪಿ ಪಿ, ಉಪನ್ಯಾಸಕರಾದ ಕೃತಿಕಾ ಕೆ ಜೆ, ಅಕ್ಷತಾ ಬಿ, ಅಜಿತ್ ಕುಮಾರ್, ಹರ್ಷಕಿರಣ, ಪಲ್ಲವಿ ಮಾರ್ಗದರ್ಶನ ನೀಡಿದ್ದರು. ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ವಿಜ್ಞಾನ ಪದವಿ ವಿಭಾಗದ ಸಂಯೋಜಕರಾದ ಸತ್ಯಪ್ರಕಾಶ್ ಡಿ ಮತ್ತು ಕಾಲೇಜಿನ ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.


							
							














