ಮಂಗಳೂರು: ಡಿಕೆಶಿ ಕೇಸ್ ವಾಪಸ್ ಹಿಂಪಡೆದಿರುವುದು ಖಂಡನೀಯ: ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಹೇಳಿಕೊಳ್ಳಲು ಆಶ್ಚರ್ಯ ಎನಿಸುವಂತಹ ಬಹಳ ನೋವಿನ ಸಂಗತಿ ನಡೆದಿದ್ದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ಭ್ರಷ್ಟಾಚಾರ ಆರೋಪದಡಿಯಲ್ಲಿ ಸಿಬಿಐ ತನಿಖೆ ಮಾಡುತ್ತಿದ್ದರೂ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಚಿವ ಸಂಪುಟ ಸಿಬಿಐ ತನಿಖೆಗೆ ಕೊಟ್ಟ ಅನುಮತಿ ವಾಪಾಸು ತೆಗೆದುಕೊಂಡಿರುವುದು ಖಂಡನೀಯ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬಿಜೆಪಿ ಮಂಗಳೂರು ಮಂಡಲ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಯಾವುದೇ ರಾಗದ್ವೇಷಗಳಿಲ್ಲದೆ ಆಡಳಿತ ನಡೆಸುವುದಾಗಿ ಪ್ರಮಾಣವಚನ ಸ್ವೀಕರಿಸಿದ ಸಿದ್ದರಾಮಯ್ಯ ಸಿಬಿಐ ತನಿಖೆಯಿಂದ ಹಿಂದೆಗೆಯುವ ಮೂಲಕ ಒಬ್ಬ ಭ್ರಷ್ಟಾಚಾರ ಆರೋಪ ಹೊತ್ತ ವ್ಯಕ್ತಿಯ ತನಿಖೆಯಿಂದ ಹಿಂದೆ ಸರಿದಿರುವುದು ಖೇದಕರ. ತನಿಖೆ ಹಂತದಲ್ಲಿರುವ ಆರೋಪದಲ್ಲಿ ಸರಕಾರ ಕೈ ಹಾಕಬಾರದು. ಜನಪ್ರತಿನಿಧಿಗಳು ಸೇರಿದಂತೆ ಕ್ರಿಮಿನಲ್ ಆರೋಪ ಇರುವಾಗ ಸರ್ಕಾರ ಕೈ ಹಾಬಾರದು ಎಂದು ಸುಪ್ರೀಂ ಕೋರ್ಟ್ ತಿಳಿಸಿದ್ದರೂ ಶಾಸನಬದ್ಧ ಸರಕಾರ ಸಚಿವ ಸಂಪುಟದ ಮೂಲಕ ಹಿಂದೆ ಪಡಿದಿದ್ದು ಸಿದ್ಧರಾಮಯ್ಯ ಸರಕಾರ ಭ್ರಷ್ಟಾಚಾರಕ್ಕೆ ಸಂಪೂರ್ಣ ಸಹಕಾರ ಕೊಡುತ್ತಿದೆ ಎಂಬುದು ಜಗಜ್ಜಾರಾಗಿದೆ ಎಂದರು.
ಮುಖ್ಯಮಂತ್ರಿ ಜೊತೆಗೆ ಎಚ್. ಕೆ. ಪಾಟೇಲ್ ರಂತಹ ಅನುಭವಿ ಕಾನೂನು ಸಚಿವರ ಮೂಲಕ ಹಿಂಪಡೆಯಬೇಕಾದರೆ ನಿಮ್ಮದು ಭ್ರಷ್ಟಾಚಾರ ವಿರುದ್ಧ ಹೋರಾಟವಲ್ಲ, ಜನರನ್ನು ಏಮಾರಿಸುತ್ತಾ ಭ್ರಚ್ಟಾಚಾರ ಪೆÇೀಷಿಸುತ್ತಿದ್ದೀರಿ. ಸರಕಾರ ಈಮಟ್ಟಕ್ಕೆ ಇಳಿದಿರುವುದು ರಾಜ್ಯದ ಜನತೆಯಲ್ಲಿ ದಿಗ್ಭ್ರಮೆ ಮೂಡಿಸಿದೆ ಎಂದು ವಿಷಾದಿಸಿದರು.
ಸುದ್ದಿಗೋಷ್ಟಿಯಲ್ಲಿ ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಕಾರ್ಯದರ್ಶಿ ಸತೀಶ್ ಕುಂಪಲ, ಮಹಿಳಾ ಮೋರ್ಚಾ ಧನಲಕ್ಷ್ಮಿ ಗಟ್ಟಿ, ಮಂಡಲ ಉಪಾಧ್ಯಕ್ಷ ಯಶವಂತ ಅಮೀನ್, ರವಿಶಂಕರ್, ಕೋಶಾಧಿಕಾರಿ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಮುಖಂಡರಾದ ಜಯಶ್ರೀ ಕರ್ಕೇರ, ರವೀಂದ್ರ ಕಂಬಳಿ,ಕಾರ್ಯದರ್ಶಿ ಆನಂದ ಶೆಟ್ಟಿ ಉಳ್ಳಾಲ ಉಪಸ್ಥಿತರಿದ್ದರು.