ಕಾಸರಗೋಡು ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ತುಳು ಲಿಪಿ ನಾಮಫಲಕ ಅನಾವರಣ

ಕಾಸರಗೋಡು ಜಿಲ್ಲೆಯ ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ತುಳು ಲಿಪಿ ನಾಮಫಲಕ ಅನಾವರಣ ಕಾರ್ಯಕ್ರಮ ನಡೆಯಿತು. ತುಳು ಸಾಹಿತಿ, ತುಲು ಲಿಪಿ ಸಂಶೋಧಕರಾದ ದಿ| ಡಾ.ಪುಂಡೂರು ವೆಂಕಟರಾಜ ಪುಣಿಂಚತ್ತಾಯರ ಹುಟ್ಟೂರು ಸಮೀಪ ಕಾಸರಗೋಡು ಜಿಲ್ಲೆಯ ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದ ತುಲು ಲಿಪಿ ನಾಮಫಲಕ ಅನಾವರಣ ಮಾಡಲಾಯಿತು. ದೇವಸ್ಥಾನದಲ್ಲಿ ತುಲು ಲಿಪಿ ನಾಮಫಲಕದ ಉದ್ಘಾಟನೆಯನ್ನು ಪುಂಡೂರು ಪುರುಷೋತ್ತಮ ಪುಣಿಂಚತ್ತಾಯ ನಿವೃತ್ತ ಉಪನ್ಯಾಸಕ, ಮೃದಂಗ ವಾದಕರು ಹಾಗು ಶ್ರೀ ಪುಂಡೂರು ರಾಮಚಂದ್ರ ಪುಣಿಂಚತ್ತಾಯ ನಿವೃತ್ತ ಶಿಕ್ಷಕ, ಕವಿ, ಯಕ್ಷಗಾನ ಕಲಾವಿದರಾದ ಇವರು ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ಮಹಾವಿಷ್ಣು ಸೇವಾ ಸಮಿತಿ ಬೆಳ್ಳೂರು ಇದರ ಅಧ್ಯಕ್ಷರಾದ ಶ್ರೀ ಎ ಬಿ ಗಂಗಾಧರ ಬಲ್ಲಾಳ್ ಅಡ್ವಳ, ಇವರು ಅಧ್ಯಕ್ಷತೆ ವಹಿಸಿದರು, ಶ್ರೀ ಮಹಾವಿಷ್ಣು ಸೇವಾ ಸಮಿತಿ ಬೆಳ್ಳೂರು ಇದರ ಕಾರ್ಯದರ್ಶಿ ಡಾ|| ಶ್ರೀ ಮೋಹನ್ ದಾಸ್ ರೈ, ಜೈ ತುಲುನಾಡ್ (ರಿ.) ಸಂಘಟನೆಯ ಉಪಾಧ್ಯಕ್ಷರಾದ ಹರಿಕಾಂತ್ ಸಾಲ್ಯಾನ್ ಕಾಸರಗೋಡು ಜೈ ತುಲುನಾಡ್ (ರಿ.) ಕಾಸರಗೋಡು ಘಟಕದ ಜೊತೆ ಕಾರ್ಯದರ್ಶಿ ಜಗನ್ನಾಥ್ ಕುಲಾಲ್, ಜೈ ತುಲುನಾಡ್ (ರಿ.) ಕಾಸರಗೋಡು ಘಟಕದ ಖಜಾಂಚಿ ಉತ್ತಮ ಉರುಳಿತಡ್ಕ ಹಾಗೂ ಇತರ ಗಣ್ಯರು ಪಾಲ್ಗೊಂಡಿದ್ದರು.

ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ತುಲು ಲಿಪಿ ನಾಮಫಲಕ ಅಳವಡಿಕೆಯ ಮಾಡಿದ ಶ್ರೀ ಮಹಾವಿಷ್ಣು ಸೇವಾ ಸಮಿತಿ ಬೆಳ್ಳೂರು ಇದರ ಅಧ್ಯಕ್ಷರಾದ ಶ್ರೀ ಎ ಬಿ ಗಂಗಾಧರ ಬಲ್ಲಾಳ್ ಅಡ್ವಳ ಇವರಿಗೆ ನೆನಪಿನ ಕಾಣಿಕೆ ನೀಡಿ ಜೈ ತುಲುನಾಡ್ (ರಿ.) ಸಂಘಟನೆಯು ಸನ್ಮಾನಿಸಿದರು. ಈ ಕಾರ್ಯಕ್ರಮಕ್ಕೆ ತುಲು ಸಾಹಿತಿ ಶ್ರೀ ವಿಜಯರಾಜ್ ಪುಣಿಂಚತ್ತಾಯ ಸ್ವಾಗತಿಸಿದರು ಹಾಗು ಚಂದ್ರಶೇಖರ ಆಚಾರ್ಯ ನಾಟೆಕಲ್ಲು ಧನ್ಯವಾದ ಗೈದರು. ತುಲು ನಾಟಕ ಕಲಾವಿದರಾದ ಸುಂದರ್ ರಾಜ್ ರೈ ನಾಟೆಕಲ್ಲು ನಿರೂಪಿಸಿದರು.

Related Posts

Leave a Reply

Your email address will not be published.