ಶಕ್ತಿ ಯೋಜನೆಯಡಿ 100 ಕೋಟಿ 47 ಲಕ್ಷ ಸ್ತ್ರೀ ದಾಟು
ಮಹಿಳೆಯರನ್ನು ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಉಚಿತವಾಗಿ ಕೊಂಡೊಯ್ಯುವ ಶಕ್ತಿ ಯೋಜನೆಯು ಕರ್ನಾಟಕದಲ್ಲಿ ಜೂನ್ 11ರಂದು ಆರಂಭವಾಗಿದೆ. ಅಲ್ಲಿಂದ ನವೆಂಬರ್ 23ರವರೆಗೆ ಶಕ್ತಿ ಯೋಜನೆಯಡಿ 100 ಕೋಟಿ 47 ಲಕ್ಷ ಮಹಿಳೆಯರ ಓಡಾಟ ಆಗಿದೆ. ಈ ಸಂಬಂಧ ಬೆಂಗಳೂರು ವಿಧಾನ ಸೌಧದ ಬಾಂಕ್ವೆಟ್ ಹಾಲಿನಲ್ಲಿ ಶುಕ್ರವಾರ ಶತಕೋಟಿ ಸಂಭ್ರಮ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವು ಕರ್ನಾಟಕ ಸರಕಾರದ ಗ್ಯಾರಂಟಿಗಳಿಗೆ ಮತ್ತಷ್ಟು ಒತ್ತು ನೀಡಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮನಹುಂಡಿ ಸಿದ್ದರಾಮಯ್ಯನವರು ಜನರ ದುಡ್ಡನ್ನು ಜನರ ಜೇಬಿಗೆ ಹಿಂತಿರುಗಿಸಿದರೆ ಬಿಜೆಪಿಗೇಕೆ ಹೊಟ್ಟೆಯುರಿ ಎಂದು ಪ್ರಶ್ನಿಸಿದರು. ಮಹಿಳೆಯರು ಹೊಸ ಯುಗದಲ್ಲಿ ಹೊಸ ಪ್ರಯಾಣ ಮಾಡುತ್ತಿದ್ದಾರೆ. ಜನರಿಗೆ ವಿದ್ಯುತ್, ಅಕ್ಕಿ ಸಾಕಷ್ಟು ಉಚಿತವಾಗಿ ಸಿಗುತ್ತಿದೆ. ಇದೆಲ್ಲ ಜನರ ಹಣದಿಂದಲೇ. ಜನರ ತೆರಿಗೆ ದುಡ್ಡು ಜನರ ಜೇಬಿಗೆ ಎಂದು ಮುಖ್ಯಮಂತ್ರಿಗಳು ಹೇಳಿದರು.