ರಸ್ತೆ ಸ್ವಚ್ಛತೆ ಮತ್ತು ರಸ್ತೆಗಳ ಗುಂಡಿಗಳ ದುರಸ್ತಿಗೆ ಆಗ್ರಹ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಸ್ವಚ್ಚತೆ ಮತ್ತು ರಸ್ತೆಗಳ ಗುಂಡಿಗಳ ದುರಸ್ತಿ ಪಡಿಸುವಂತೆ , ಹೀಗೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು, ದಕ್ಷಿಣ ಕನ್ನಡ ಜಿಲ್ಲಾ ಆಮ್ ಆದ್ಮಿ ಪಾರ್ಟಿ ವತಿಯಿಂದ ಮಂಗಳೂರು ಮಹಾನಗರಪಾಲಿಕೆ ಆಯುಕ್ತರಿಗೆ ಲಿಖಿತವಾಗಿ ದೂರು ನೀಡಲಾಯಿತು.

ನಗರದ ಪಾಲಿಕೆ ಕಚೇರಿಯಲ್ಲಿ ಎಎಪಿ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ಅವರ ನೇತೃತ್ವದಲ್ಲಿ ಪಕ್ಷದ ನಿಯೋಗ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಅವರನ್ನು ಭೇಟಿಯಾಗಿ ನಗರದ ಹಲವು ಸಮಸ್ಯೆಗಳ ಕುರಿತು ಆಯುಕ್ತರ ಗಮನಕ್ಕೆ ತಂದು ಚರ್ಚಿಸಿದರು. ಈ ವೇಳೆ
ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಪುಚ್ಚಪ್ಪಾಡಿ, ಎಎಪಿ ರಾಷ್ಟ್ರೀಯ ಮಂಡಳಿ ಸದಸ್ಯರಾದ ಅಶೋಕ ಎಡಮಲೆ, ಶಾನನ್ ಪಿಂಟೋ, ಜೆರಾರ್ಡ್ ಟವರ್ಸ್, ಜಯಪ್ರಕಾಶ್ ರಾವ್, ಮಂಗಳೂರು ಉತ್ತರ ವಿಧಾನಸಭಾ ಅಧ್ಯಕ್ಷ ನವೀನ್ ಚಂದ್ರ ಪೂಜಾರಿ, ಬೆನೆಟ್ ನವಿತಾ ಕ್ರಾಸ್ತಾ, ರೋನಿ ಕ್ರಾಸ್ತಾ, ಕೆ.ಎನ್.ಶ್ರೀನಿವಾಸ್, ಅವ್ರೆನ್ ಡಿಸೋಜ, ಸಿರಿಲ್ ಜಿವಾನ್, ವಲ್ಸ ಜಿವಾನ್, ಗ್ಲಾವಿನ್ ಹಾಗೂ ಮತ್ತಿತರ ಪಕ್ಷದ ಸದಸ್ಯರು ಉಪಸ್ಥಿತರಿದ್ದರು.
