ಮಂಗಳೂರು: ಸೆ.17ರಂದು ಪುಣೆ ಕುಲಾಲ ಸುಧಾರಕ ಸಂಘದ 45ನೇ ವಾರ್ಷಿಕ ಮಹಾಸಭೆ- ಸಾಂಸ್ಕ್ರತಿಕ ಕಾರ್ಯಕ್ರಮ

ಮಂಗಳೂರು: ಸೆ.17ರಂದು ಪುಣೆ ಕುಲಾಲ ಸುಧಾರಕ ಸಂಘದ 45ನೇ ವಾರ್ಷಿಕ ಮಹಾಸಭೆ- ಸಾಂಸ್ಕ್ರತಿಕ ಕಾರ್ಯಕ್ರಮ

ಮಂಗಳೂರು: ಪುಣೆ ಕುಲಾಲ ಸುಧಾರಕ ಸಂಘದ 45ನೇ ವಾರ್ಷಿಕ ಮಹಾಸಭೆಯು ಸೆ.17ರಂದು ಬೆಳಿಗ್ಗೆ 10ಗಂಟೆಗೆ ಪುಣೆಯ ಡಾ.ಶ್ಯಾಮ್‍ರಾವ್ ಕಲ್ಮಾಡಿ ಕನ್ನಡ ಹೈಸ್ಕೂಲ್‍ನಲ್ಲಿ ನಡೆಯಲಿದೆ.

ಬೆಳಿಗ್ಗೆ ಸಾಂಸ್ಕ್ರತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಲೆಕ್ಕಪತ್ರ ಮಂಡನೆ, ಗೌರವಾರ್ಪಣೆ, ಮಧ್ಯಾಹ್ನ ಭೋಜನ, ನಂತರ ನೆಲ್ಯಾಡಿ ವನಶ್ರೀ ಕಲಾವಿದರಿಂದ ಕುಸಾಲ್ದ ಮಸಾಲೆ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.

ಪುಣೆ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಹರೀಶ್ ಕುಲಾಲ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು ಮಂಗಳೂರು ಕುಲಾಲ ಭವನದ ಫಂಡ್ ರೇಸಿಂಗ್ ಕಮಿಟಿ ವೈಸ್ ಚೇಯರ್‍ಮ್ಯಾನ್ ಸುನೀಲ್ ರಾಜು ಸಾಲ್ಯಾನ್, ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಪ್ರವೀಣ್ ಶೆಟ್ಟಿ ಪುತ್ತೂರು, ಉದ್ಯಮಿ ದಯಾನಂದ ಮೂಲ್ಯ, ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಎ.ಮೂಲ್ಯ, ಬಂಟ್ವಾಳ ಕುಲಾಲ ಸಂಘದ ನಿಕಟ ಪೂರ್ವಾಧ್ಯಕ್ಷ ನಾರಾಯಣ ಸಿ.ಪೆರ್ನೆ ಮೊದಲಾದವರು ಅತಿಥಿಗಳಾಗಿ ಭಾಗವಹಿಸುವರು ಎಂದು ಸಂಘದ ಪ್ರಕಟಣೆ ತಿಳಿಸಿದೆ.

Related Posts

Leave a Reply

Your email address will not be published.