ಮಂಗಳೂರಿನ ಸಾನಿಧ್ಯ ವಸತಿಯುತ ಶಾಲೆಯಲ್ಲಿ ಓಣಂ ಸಂಭ್ರಮ – ಗಮನ ಸೆಳೆದ ಪೂಕಳಂ

ಮಂಗಳೂರಿನ ಶಕ್ತಿನಗರದ ಸಾನಿಧ್ಯ ಭಿನ್ನ ಸಾಮಥ್ರ್ಯದ ವಸತಿಯುತ ಶಾಲೆಯಲ್ಲಿ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಕೇರಳದ ಸಂಪ್ರದಾಯ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಏಕೈಕ ಹಬ್ಬವೇ ಓಣಂ. ಅಂತಹ ಓಣಂ ಹಬ್ಬವನ್ನು ಮಂಗಳೂರಿನಲ್ಲೂ ಆಚರಿಸಿ ಸಂಭ್ರಮಿಸುತ್ತಿದ್ದಾರೆ. ಮಂಗಳೂರಿನ ಸಾನಿಧ್ಯ ಸಂಸ್ಥೆಯಲ್ಲಿ ಓಣಂ ಹಬ್ಬದ ಸಂಕೇತವಾಗಿ ಪೂಕಳಂನ್ನು ರಚಿಸಿ ವಿಶೇಷವಾಗಿ ಆಚರಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ಪೊಲೀಸ್ ಉಪ ಆಯುಕ್ತರಾದ ರವೀಶ್ ನಾಯಕ್ ಅವರು ಮಾತನಾಡಿ, ಇಲ್ಲಿನ ಮಕ್ಕಳನ್ನು ನೋಡುತ್ತಿದ್ದಾಗ ನಾನು ಪಡೆದ ತರಬೇತಿಯ ನೆನಪಾಗುತ್ತಿದೆ. ನಮಗೆ ಒಂದು ವರ್ಷ ತರಬೇತಿಯನ್ನು ಕೊಟ್ಟರೂ ಕೂಡ ಎಷ್ಟೋ ವರ್ಷ ಕಲಿಯಲು ಬೇಕಾಗುತ್ತದೆ. ಸಾನಿಧ್ಯ ಸಂಸ್ಥೆಯ ಮಕ್ಕಳಿಗೆ ತರಬೇತಿ ನೀಡುತ್ತಿರುವ ಸಂಸ್ಥೆಯ ಆಡಳಿತ ಮಂಡಳಿ, ಸಿಬ್ಬಂದಿಗಳ ಮಹಾನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಾನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ಓಣಂ ಹಬ್ಬಕ್ಕೆ ಶುಭಾಷಯ ಕೋರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಸಾನಿಧ್ಯ ಸಂಸ್ಥೆಯ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಕಾವೂರು ಇನ್ಸ್‍ಪೆಕ್ಟರ್ ನಳಿನಿ, ಶ್ರೀ ಗಣೇಶ್ ಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ಮಹಾಬಲ ಮಾರ್ಲ, ಉಪಾಧ್ಯಕ್ಷರಾದ ದೇವದತ್ತ್ ರಾವ್, ಸೆಕ್ರೆಟ್ರಿ ಪ್ರೊ. ರಾಧಾಕೃಷ್ಣ, ನಿರ್ದೇಶಕರಾದ ಮೊಹಮ್ಮದ್ ಬಶೀರ್, ಸ್ಟಿಫನ್ ಪಿಂಟೋ, ಸಲಹಾ ಸಮಿತಿಯ ಎರಿಕ್ ಡಿಸೋಜಾ, ಸಂತೋಷ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.