ಮಂಗಳೂರು: ಪಣಂಬೂರು ಕಡಲ ತೀರದಲ್ಲಿ ಇಬ್ಬರ ಶವ ಪತ್ತೆ
ಮಧ್ಯವಯಸ್ಕ ವ್ಯಕ್ತಿ ಮತ್ತು ಮಹಿಳೆ ಸಮುದ್ರಕ್ಕೆ ಬಿದ್ದಿರುವ ಘಟನೆ ನಡೆದಿದ್ದು, ಬೆಂಗಳೂರಿನ ಲಕ್ಷ್ಮಿ (43), ಬೋರಲಿಂಗಯ್ಯ (50) ಮೃತ ವ್ಯಕ್ತಿಗಳು ಎಂದು ತಿಳಿದು ಬಂದಿದೆ.
ಇವರಿಬ್ಬರು ಮನೆಯಲ್ಲಿ ಹೇಳದೇ ಬೆಂಗಳೂರಿನಿಂದ ತೆರಳಿರುವುದಾಗಿ ಪೆÇಲೀಸರಿಗೆ ಪ್ರಾಥಮಿಕ ಮಾಹಿತಿ ದೊರಕಿದೆ. ಇವರಿಬ್ಬರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.
ಪಣಂಬೂರು ಪೆÇಲೀಸರು ಸಂಬಂಧಿಕರನ್ನು ಸಂಪರ್ಕಿಸಿದ್ದು, ಇವರಿಬ್ಬರ ಸಾವಿನ ಸುದ್ದಿ ಕೇಳಿ ಸಂಬಂಧಿಕರು ಮಂಗಳೂರಿಗೆ ಬರುತ್ತಿದ್ದಾರೆ ಎಂದು ವರದಿಯಾಗಿದೆ. ಇಬ್ಬರ ಶವಗಳನ್ನು ಮೇಲೆತ್ತಿದ್ದು, ಶವಾಗಾರದಲ್ಲಿ ಇಡಲಾಗಿದೆ.