ಮಂಗಳೂರು: ವಾಲಿ ಸುಗ್ರೀವರ ಒಡ್ಡೋಲಗ ವಿಡಿಯೋ ಲೋಕಾರ್ಪಣೆ

ಯಕ್ಷಗಾನ ಪರಂಪರೆಯ ವಾಲಿ-ಸುಗ್ರೀವರ ಒಡ್ಡೋಲಗ ದಾಖಲೀಕರಣದ ವಿಡಿಯೋ ಮಧುಸೂಧನ ಅಲೆವೂರಾಯ ಅವರ ಪ್ರಸಿದ್ಧ ಯೂಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆಗೊಂಡಿತು.

ಮಂಗಳೂರಿನ ಪತ್ರಿಕಾಭವನದಲ್ಲಿ ವಾಲಿ ಸುಗ್ರೀವರ ಒಡ್ಡೋಲಗ ವಿಡಿಯೋ ಲೋಕಾರ್ಪಣೆಗೊಂಡಿತು. ಇದೇ ವೇಳೆ ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ರಾಜ್ಯಾಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಅವರು ಮಾತನಾಡಿ, ರಾಷ್ಟ್ರಪ್ರಶಸ್ತಿ ಪುರಸ್ಕøತ ಹಿರಿಯ ಕಲಾವಿದ ಕೆ. ಗೋವಿಂದ ಭಟ್ ಸೂರಿಕುಮೇರಿಯವರ ಮಾರ್ಗದರ್ಶನದಲ್ಲಿ ವಾಲಿ ಸುಗ್ರೀವರ ಒಡ್ಡೋಲಗ ಚಿತ್ರೀಕರಣ ಮಾಡಿದ್ದು, ಅತ್ಯದ್ಭುತವಾಗಿ ಮೂಡಿ ಬಂದಿದೆ ಎಂದರು.

ಈ ಸಂದರ್ಭದಲ್ಲಿ ವಿಡಿಯೋ ದಾಖಲೀಕರಣದ ಕೆ ಗೋವಿಂದ ಭಟ್, ಸಂಶೋಧಕ ಸಂಯೋಜಕರಾದ ಕೆ.ಪಿ. ರಾಜಗೋಪಾಲ್ ಉಪಸ್ಥಿತರಿದ್ದರು.
