ಮಂಗಳೂರಿನಲ್ಲಿ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಿಗೆ ಸೇಬು ಹಣ್ಣಿನ ಹಾರದ ಅದ್ಧೂರಿ ಸ್ವಾಗತ
ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಮಂಗಳೂರಿಗೆ ಆಗಮಿಸಿದ ಬಿ. ವೈ ವಿಜಯೇಂದ್ರ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ನಗರಕ್ಕೆ ಆಗಮಿಸಿದ ಅವರು, ತೆರೆದ ವಾಹನದ ಮೂಲಕ ನಗರದ ಬಂಟ್ಸ್ ಹಾಸ್ಟೆಲ್ನಿಂದ ಸಿವಿ ನಾಯಕ್ ಹಾಲ್ ವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದರು. ಈ ವೇಳೆ ಬಿಜೆಪಿಯ ಮಹಿಳಾ ಕಾರ್ಯಕರ್ತರು ಆರತಿ ಬೆಳಗಿ, ತಿಲಕ ಹಚ್ಚಿ ಬರಮಾಡಿಕೊಂಡರು, ಜೊತೆಗೆ ಸೇಬು ಹಣ್ಣಿನ ಹಾರದ ಮೂಲಕ ಭರ್ಜರಿ ಸ್ವಾಗತ ಮಾಡಿದರು.


















