ಬೈಂದೂರು : ಯೋಗ ಪರ್ಯಟನ ವಿಶೇಷ ಸತ್ಸಂಗ ಕಾರ್ಯಕ್ರಮ

ವಿವೇಕ ಜಾಗ್ರತ ಬಳಗಗಳು ಮಧ್ಯ ವಲಯ -4 ಡಿವೈನ್ ಪಾರ್ಕ್ ಟ್ರಸ್ಟ್ ರಿಜಿಸ್ಟರ್ ಸಾಲಿಗ್ರಾಮ ಇವರ ಅಂಗಸಂಸ್ಥೆ, ಯೋಗ ಪರ್ಯಟನ ವಿಶೇಷ ಸತ್ಸಂಗ ಕಾರ್ಯಕ್ರಮ ಒಡೆಯರ ಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರ ನಾಗೂರು ಸಂಭ್ರಮದಲ್ಲಿ ನಡೆಯಿತು.

ಬೈಂದೂರು ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀಯುತ ಗುರುರಾಜ್ ಗಂಟಿಹೊಳೆ ಯವರಿಗೆ ಡಿವೈನ್ ಪಾರ್ಕ್ ನ ಸಂಸಾರಿ ಸಂತ ಪರಮಪೂಜ್ಯ ಡಾಕ್ಟರ್ ಜೀ ಅವರ ಸಾಧನಾ ಗಾಥೆಯ 5 ಆವೃತ್ತಿಯನ್ನು ಹಸ್ತಾಂತರಿಸಿದರು.

ಕೋಟ ಮೂಡು ಗಿಳಿಯಾ ರು ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನ ದ ವೈದಕೀಯ ನಿರ್ದೇಶಕರು ಆಗಿರುವ ಡಾ. ಎ.ವಿವೇಕ ಉಡುಪರು 18 ನೆಯ ಯೋಗ ಪರ್ಯಟನ ಕಾರ್ಯಕ್ರಮದಲ್ಲಿ ಶ್ರೀಯುತರು ಯೋಗ ಬನದ ಮಹಿಮೆಯ ಕುರಿತು ವಿಶೇಷ ಉಪನ್ಯಾಸ ನಡೆಸಿ ಕೊಟ್ಟರು

ವಿಶಾಲತೆ,ಹೃದಯ ಶ್ರೀಮಂತಿಕೆ ಗಳೆ ನಿಜವಾದ ಆರೋಗ್ಯದ ಗುಟ್ಟು ಮನಸ್ಸು ರೂಪಿಸು ವಂತಹ ಚಿಂತನೆಗೆ ಬೆಲೆ ಕೊಟ್ಟಾಗ ಚಿಂತೆ,ಭಯ,ಆತಂಕ,ಖಿನ್ನತೆ, ಉದ್ವೇಗ ಎಂಬ ಬ್ರಹ್ಮರಾಕ್ಷಸ ಓಡಿ ಹೋಗುತ್ತಾನೆ.ಆಗ ರೋಗ ಕಡಿಮೆಯಾಗಿ ಸದೃಢವಾದ ದೈಹಿಕ, ಮಾನಸಿಕ,ಆಧ್ಯಾತ್ಮಿಕ ಪರಿಪೂರ್ಣತೆಯ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ ಎಂಬುದನ್ನು ಸ್ವಾಮಿ ವಿವೇಕಾನಂದರ ಜೀವನದ ಆದರ್ಶ ಗಳೊಂದಿಗೆ ಸಮೀಕರಿಸಿ ತಿಳಿಸಿದರು.

ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷರು ,ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಸುದೇಶ್ ರಾವ್, ವಾಸು ಸುವರ್ಣ, ಸಂತೋಷ್ ನಾಗೂರು,ಜಯಾನಂದ ಹೋಬಳಿರ್ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ರಾಜೇಶ್ ನಾಯರ್ ಪ್ರಸ್ತಾವನೆ ಗೈದು, ಡಾ. ಪಿ. ಎಸ್.ರಾವ್ ಸ್ವಾಗತಿಸಿ, ನಿವೃತ್ತ ಉಪನ್ಯಾಸಕ ಪ್ರೋ.ಜಗದೀಶ್ ವಂದಿಸಿದರು,ಮಹೇಶ್ ವಕ್ವಾಡಿ ನಿರೂಪಿಸಿದರು.

Related Posts

Leave a Reply

Your email address will not be published.