ಮರವಂತೆ ತ್ರಾಸಿ ಬೀಚ್‍ನಲ್ಲಿ ಗದಗ ಮೂಲದ ಯುವಕ ಸಮುದ್ರಪಾಲು

ಬೈಂದೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ತ್ರಾಸಿ ಮರವಂತೆ ಬೀಚ್‍ನಲ್ಲಿ ಮಧ್ಯಾಹ್ನದ ವೇಳೆ ಗದಗ ಮೂಲದ ಮೂವರು ಯುವಕರು ಈಜಲು ಹೋಗಿದ್ದು ಈ ಪೈಕಿ ಗದಗ ಜಿಲ್ಲೆಯ ಮುಂಡ್ರಂಗಿ ತಾಲೂಕು ಮೇವಂಡಿ ಗ್ರಾಮದ ಪೀರ್ ನದಾಫ್ ನೀರುಪಾಲಾಗಿದ್ದಾರೆ.

ಮಧ್ಯಾಹ್ನದ ವೇಳೆ ಸಮುದ್ರದ ನೀರಿಗೆ ಈಜಲು ಇಳಿದಿದ್ದು ಮೂವರು ಅಲೆಯ ರಭಸಕ್ಕೆ ಓರ್ವ ಯುವಕ ಕೊಚ್ಚಿಕೊಂಡು ಹೋಗಿದ್ದಾರೆ. ಸ್ಥಳೀಯ ಆಂಬುಲೆನ್ಸ್ ಡೈವರ್ ಸಮಾಜಸೇವಕ ಇಬ್ರಾಹಿಂ ಗಂಗೊಳ್ಳಿ ಹಾಗೂ ತಂಡ, ಜೀವ ರಕ್ಷಕ ಈಜುತಜ್ಞ ದಿನೇಶ್ ಖಾರ್ವಿ ಹಾಗೂ ತಂಡ ಮತ್ತು ಅಗ್ನಿಶಾಮಕ ದಳ ಮತ್ತು ಕೋಸ್ಟಲ್ ಗಾರ್ಡ್ ಸಿಬ್ಬಂದಿಗಳು ಹಾಗೂ ಗಂಗೊಳ್ಳಿ ಪೆÇಲೀಸರು ಹುಡುಕಾಟ ಕಾರ್ಯಚರಣೆ ನಡೆಸುತ್ತಿದ್ದಾರೆ.
