ಶಾಸಕ ಅಶೋಕ್ ರೈ ಬ್ಯಾನರ್ ಗೆ ಹಾನಿ
ಆರೋಪಿಗಳ ಬಂಧಿಸಿ: ಯುವಕಾಂಗ್ರೆಸ್ ನಿಂದ ಮನವಿ
ಪುತ್ತೂರು; ನರಿಮೊಗರು ಗ್ರಾಮದ ಶಿಬರ ನಡುವಾಲ್ ಎಂಬಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಅಭಿನಂದನೆ ಕೋರಿ ಹಾಕಲಾದ ಬ್ಯಾನರ್ ಗೆ ಕಿಡಿಗೇಡಿಗಳು ಹಾನಿ ಮಾಡಿದ್ದು ಆರೋಪಿಗಳನ್ನು ತಕ್ಷಣ ಬಂಧಿಸುವAತೆ ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಖಿಲ್ ಕಲ್ಲಾರೆ ಪೊಲೀಸರಿಗೆ ಮನವಿ ನೀಡಿದ್ದಾರೆ.
ಆ ಭಾಗದಲ್ಲಿ ಬಹು ವರ್ಷಗಳಿಂದ ರಸ್ತೆ ಬೇಡಿಕೆ ಇತ್ಗು.ಇಷ್ಟು ವರ್ಷ ಯಾರಿಂದಲೂ ಆ ಭಾಗದ ರಸ್ತೆ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗಿರಲಿಲ್ಲ. ಶಾಸಕರು ಮುತುವರ್ಜಿ ವಹಿಸಿಸ್ಥಳೀಯರ ಜೊತೆ ಮಾತುಕತೆ ನಡೆಸಿ ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡಿದ್ದು ಮಾತ್ರವಲ್ಲದೆ ರಸ್ತೆ ಕಾಮಗಾರಿಗೆ ತಕ್ಷಣಕ್ಕೆ ೫ ಲಕ್ಷ ರೂ ಅನುದಾನವನ್ನು ಒದಗಿಸಿದ್ದರು. ಇದಕ್ಕಾಗಿ ಆ ಪ್ರದೇಶದಲ್ಲಿಶಾಸಕರಿಗೆ ಅಭಿನಂದನೆ ಸಲ್ಲಿಸಿ ಹಾಕಲಾಗಿದ್ದ ಬ್ಯಾನರನ್ನು ಹರಿದು ಹಾಕಿದ್ದಾರೆ. ಕೃತ್ಯ ಎಸಗಿದ ವಿಘ್ನ ಸಂತೋಷಿಗಳನ್ನು ತಕ್ಷಣ ಬಂಧಿಸಬೇಕು ಇಲ್ಲವಾದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅಖಿಲ್ ಕಲ್ಲಾರೆ ತಿಳಿಸಿದ್ದಾರೆ. ಯುವ ಕಾಂಗ್ರೆಸ್ ಮುಖಂಡ ರಾಕೇಶ್ ಬಡಗನ್ನೂರು ಉಪಸ್ಥಿತರಿದ್ದರು.


















