ಮೂಡುಬಿದ್ರಿ : ಬಂಟರ ಸಂಘ ಮಹಿಳಾ ಘಟಕದ ಪ್ರಥಮ ವಾರ್ಷಿಕೋತ್ಸವ

ಬಂಟರ ಸಂಘ ಮಹಿಳಾ ಘಟಕ ಮೂಡುಬಿದ್ರಿ ಇದರ ಪ್ರಥಮ ವಾರ್ಷಿಕೋತ್ಸವ ಸಮಾರಂಭವು ಮೋಹಿನಿ ಅಪ್ಪಾಜಿ ನಾಯಕ್ ಸಭಾಂಗಣ ವಿದ್ಯಾಗಿರಿ ಮೂಡುಬಿದ್ರಿ ಇಲ್ಲಿ ನೆರವೇರಿತು. ಸಮಾರಂಭದ ಅಧ್ಯಕ್ಷತೆಯನ್ನ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಶೋಭಾ ಎಸ್ ಹೆಗ್ಡೆ ಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಮೂಡುಬಿದರೆ (ರಿ) ಇದರ ಅಧ್ಯಕ್ಷರಾದ ಶ್ರೀ ತಿಮ್ಮಯ್ಯ ಶೆಟ್ಟಿ ಅವರು ವಹಿಸಿದ್ದರು.

ಸಮಾರಂಭದ ಉದ್ಘಾಟನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ಇದರ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಬಂಟ ಸಮಾಜದ ಏಳಿಗೆಯಲ್ಲಿ ಮಹಿಳೆಯರ ಪಾತ್ರ ಅಪೂರ್ವ ವಾದದ್ದು, ಬಹಳ ಹಿಂದಿನ ಕಾಲದಿಂದಲೂ ಮಹಿಳೆಯರಿಗೆ ಪ್ರಾಧಾನ್ಯತೆಯನ್ನ ನೀಡುತ್ತಾ ಬಂದಿರುವಂತಹ ಸಮಾಜವೆಂದರೆ ಅದು ಬಂಟ ಸಮಾಜ ವೆಂದು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಮಹಿಳಾ ಘಟಕದ ಗೌರವಾಧ್ಯಕ್ಷರಾದ ಶ್ರೀಮತಿ ಜಯಶ್ರೀ ಅಮರನಾಥ್ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅತಿಥಿಗಳಾಗಿ ಬಂಟರ ಸಂಘ ಬಂಟ್ವಾಳದ ಅಧ್ಯಕ್ಷರಾದ ಶ್ರೀ ಚಂದ್ರಹಾಶೆಟ್ಟಿ ಶ್ರೀ ಅಮರನಾಶೆಟ್ಟಿ ಹಂಡಿಂಜೆ ಗುತ್ತು ಸಿ.ಎಂ. ಡಿ , L D S infotech private Ltd Mumbai ., ಡಾ. ಅಮರಶ್ರೀ ಅಮರನಾಥ್ ಶೆಟ್ಟಿ , ಶ್ರೀ ಸುಚರಿತ ಶೆಟ್ಟಿ , ಶ್ರೀ ಎಂ ಪುರುಷೋತ್ತಮ ಶೆಟ್ಟಿ , ಶ್ರೀ ದಿವಾಕರ ಶೆಟ್ಟಿ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ರಾಜೇಶ್ವರಿ ಡಿ.ಶೆಟ್ಟಿ, ಮಂಗಳೂರು ಇವರು ಭಾಗವಹಿಸಿ ವೈಯಕ್ತಿಕವಾಗಿ ಕೆಲಸ ಮಾಡುವುದು ಸುಲಭ, ಆದರೆ ಸಂಘಟನೆಯಲ್ಲಿ ಸೇರಿಕೊಂಡು ಕೆಲಸ ಮಾಡುವುದು ಕಷ್ಟಸಾಧ್ಯ. ಆದರೆ ಬಂಟರ ಸಂಘದ ಮಹಿಳಾ ಘಟಕವು ಈ ಕಾರ್ಯವನ್ನು ಅತ್ಯುತ್ತಮವಾಗಿ ಮಾಡಿದೆ ಎಂದು ಸಂಘಟನೆಯಲ್ಲಿ ಪದಾಧಿಕಾರಿಗಳ ಪಾತ್ರ ಎಷ್ಟು ಮಹತ್ವದ್ದು ಎಂಬುದನ್ನ ವಿವರಿಸುತ್ತಾ ಮಹಿಳಾ ಘಟಕಕ್ಕೆ ಶುಭಾಶಯವನ್ನು ಕೋರಿದರು. ಮಹಿಳಾ ಘಟಕದ ಕೋಶಾಧಿಕಾರಿ ಶ್ರೀಮತಿ ಗೀತಾ ಪಿ .ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸುಜಾತ ಶೆಟ್ಟಿ ಅವರು ಸ್ವಾಗತಿಸಿದರು . ಶ್ರೀಮತಿ ರಂಜಿತಾ ಶೆಟ್ಟಿ ಅವರು ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಕಾರ್ಯದರ್ಶಿ ಶ್ರೀಮತಿ ಸೌಮ್ಯ ಎಸ್. ಶೆಟ್ಟಿ ಧನ್ಯವಾದವನ್ನಿತ್ತರು.

Related Posts

Leave a Reply

Your email address will not be published.