ಮೂಡುಬಿದಿರೆ: ಪುತ್ತಿಗೆ ಗ್ರಾ.ಪಂಚಾಯತ್: ಸಿಪಿಐಎಂ ಬೆಂಬಲಿತೆ ರಾಧ ಅಧ್ಯಕ್ಷೆ, ಬಿಜೆಪಿಯ ಬೆಂಬಲಿತ ದಯಾನಂದ ಉಪಾಧ್ಯಕ್ಷರಾಗಿ ಆಯ್ಕೆ

ಮೂಡುಬಿದಿರೆ: ಪುತ್ತಿಗೆ ಗ್ರಾ.ಪಂಚಾಯತ್ ನಲ್ಲಿ ಗುರುವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಬಿಜೆಪಿ ಸದಸ್ಯನೋರ್ವ ಅಡ್ಡ ಮತದಾನದ ಮಾಡಿದ ಪರಿಣಾಮವಾಗಿ ಸಿಪಿಐಎಂ ಬೆಂಬಲಿತ ಸದಸ್ಯೆ ರಾಧಾ ಅವರು ಅಧ್ಯಕ್ಷೆಯಾಗಿ ಹಾಗೂ 11 ಜನ ಸದಸ್ಯರ ಬೆಂಬಲವಿರುವ ಬಿಜೆಪಿಯ ದಯಾನಂದ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಸಿಪಿಐಎಂ ಬೆಂಬಲಿತೆ ರಾಧಾ ಅವರು ಪುತ್ತಿಗೆ ಪಂಚಾಯತ್ ನಲ್ಲಿ ಸಿಪಿಐಎಂನ ಓರ್ವರೇ ಸದಸ್ಯರಾಗಿದ್ದು, 11 ಜನ ಬಿಜೆಪಿ, 7 ಜನ ಕಾಂಗ್ರೆಸ್, 2 ಜನ ಎಸ್ ಡಿಪಿಐ ಬೆಂಬಲಿತ ಸದಸ್ಯರಿದ್ದರು.
ಬಿಜೆಪಿಯ ಸದಸ್ಯರೋರ್ವರು ಅಡ್ಡ ಮತದಾನ ಮಾಡಿದ ಪರಿಣಾಮವಾಗಿ ಬಿಜೆಪಿಗೆ ಒಲಿಯಬೇಕಾಗಿದ್ದ ಅಧ್ಯಕ್ಷ ಸ್ಥಾನದ ಪಟ್ಟವನ್ನು ಕಳೆದುಕೊಂಡಿದೆ.
