ಮೂಡುಬಿದಿರೆ ಗಣೇಶೋತ್ಸವ ಶೋಭಾಯಾತ್ರೆ : ತೆಂಗಿನ ಗೆರಟೆಯಲ್ಲಿ ಕಷಾಯ ಸೇವನೆ

ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಉತ್ತಮ ಆರೋಗ್ಯದ ದೃಷ್ಠಿಯಿಂದಲೋ ಅಥವಾ ಆರ್ಥಿಕವಾಗಿ ಹಿಂದುಳಿದುದರಿಂದ ಗ್ಲಾಸ್ ಅಥವಾ ಸ್ಟೀಲ್ ಲೋಟಗಳನ್ನು ತೆಗೆದುಕೊಳ್ಳಲು ಅಸಹಾಯಕರಾಗಿರುವುದರಿಂದಲೋ ಏನೋ ತೆಂಗಿನ ಗೆರಟೆಯಲ್ಲಿಯೇ ಚಹಾ, ನೀರು ಅಥವಾ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದರು. ನಂತರದ ದಿನಗಳಲ್ಲಿ ನಾವು ಅಭಿವೃದ್ಧಿ ಹೊಂದುತ್ತಿದ್ದಂತೆ ಪ್ಲಾಸ್ಟಿಕ್ ಲೋಟ, ಸ್ಟೀಲ್ ಲೋಟ ಮತ್ತು ಪೇಪರ್ ಲೋಟಗಳಿಗೆ ಮಾರು ಹೋದೆವು. ಆದರೆ ಇದೀಗ ಮತ್ತೆ ನಾವು ಹಿಂದಿನ ಕಾಲದತ್ತ ಮುಖ ಮಾಡುತ್ತೀದ್ದೇವೆ ಎಂದರೆ ತಪ್ಪಾಗಲಾರದು. ಇದಕ್ಕೆ ನಿದರ್ಶನವೆಂಬಂತೆ ಮೂಡುಬಿದಿರೆಯಲ್ಲಿ 59ನೇ ವರ್ಷದ ಗಣೇಶೋತ್ಸವದ ಶೋಭಾಯಾತ್ರೆಯಲ್ಲಿ ಸಾರ್ವಜನಿಕರಿಗೆ ತೆಂಗಿನ ಗೆರಟೆಯಲ್ಲಿಯೇ ಪಾನಕದ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಜನರಿಂದ ಅಭೂತಪೂರ್ಣ ಸ್ಪಂದನೆ ಸಿಕ್ಕಿದೆ.

ಮೂಡುಬಿದಿರೆಯನ್ನು ತ್ಯಾಜ್ಯ ಮುಕ್ತವಾಗಿ ಮಾಡಬೇಕೆಂಬ ಉದ್ದೇಶದಿಂದ ಮೂಡುಬಿದಿರೆ ಪುರಸಭೆಯು ಹಲವಾರು ರೀತಿಯ ಸರ್ಕಸ್ ಮಾಡುತ್ತಾ ಬರುತ್ತಿದೆ. ಆದರೆ ತಿನ್ನಲು, ಕುಡಿಯಲು ಬಳಸಿ ಎಸೆಯುವ ಪ್ಲಾಸಿಕ್ ಹಾಗೂ ಪೇಪರ್ ಲೋಟ, ಪ್ಲೇಟುಗಳ ಬದಲಿಗೆ ಪ್ರಕೃತಿದತ್ತವಾಗಿ ದೊರೆಯುವ “ಪರಿಸರ ಪ್ರೇಮಿ” ತೆಂಗಿನ ಗೆರಟೆಯನ್ನು ಬಳಸುವ ಟ್ರೆಂಡನ್ನು ಮೂಡುಬಿದಿರೆ ಜೈನ್ ಪಿ.ಯು.ಕಾಲೇಜಿನ ಉಪನ್ಯಾಸಕಿ ಸಂಧ್ಯಾ ಪರಿಚಯಿಸುತ್ತಿದ್ದು ಇದನ್ನು ಸಾರ್ವಜನಿಕ ಗಣೇಶೋತ್ಸವದ ಶೋಭಾಯಾತ್ರೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪರಿಚಯಿಸಿದ್ದಾರೆ.

moodabidre

ಮೂಡುಬಿದಿರೆ ಸೇರಿದಂತೆ ಪರಿಸರದ ಜನರಲ್ಲಿ ತ್ಯಾಜ್ಯ ಸಂಸ್ಕರಣೆ ಹಾಗೂ ತ್ಯಾಜ್ಯ ನಿರ್ವಹಣೆಯ ಬಗೆಗೆ ದೊಡ್ಡ ಕ್ರಾಂತಿಯನ್ನೇ ಸಂಧ್ಯಾ ಅವರು ಮಾಡುತ್ತಿದ್ದಾರೆ. ಗೆರಟೆಯಿಂದ ಹಳೆಯ ಮಾದರಿಯ ಬಡಿಸುವ ಸೌಟುಗಳ ತಯಾರಿ, ಅಲಂಕಾರಿಕಾ ವಸ್ತುಗಳ ತಯಾರಿ, ಪೆನ್ ಸ್ಟ್ಯಾಂಡ್, ಆಟಿಕೆ ಹೀಗೆ ಹಲವು ಪರಿಕರಗಳನ್ನು ಗೆರಟೆಯ ಮೂಲಕ ಪರಿಚಯಿಸಲು ಅವರು ಉತ್ಸುಕರಾಗಿದ್ದಾರೆ.

Related Posts

Leave a Reply

Your email address will not be published.