ಮೂಡುಬಿದಿರೆ: ಹಿರಿಯ ಆಟೋ ಚಾಲಕ ಗುರುವಪ್ಪ ಪೂಜಾರಿ ನಿಧನ
ಮೂಡುಬಿದಿರೆ: ಕಳೆದ ಹಲವಾರು ವರ್ಷಗಳಿಂದ ಮೂಡುಬಿದಿರೆಯಲ್ಲಿ ಹಿರಿಯ ಅಟೋ ಚಾಲಕರಾಗಿ, ರಂಗಕಲಾವಿದರಾಗಿ ಗುರುತಿಸಿಕೊಂಡಿದ್ದ ಒಂಟಿಕಟ್ಟೆಯ ಗುರುವಪ್ಪ ಪೂಜಾರಿ ಗುರುವಪ್ಪ ಪೂಜಾರಿ
ಒಂಟಿಕಟ್ಟೆಯ ಗುರುವಪ್ಪ ಪೂಜಾರಿ(68)ಅಲ್ಪ ಕಾಲದ ಅನಾರೋಗ್ಯದಿಂದ ಸೋಮವಾರ ಸ್ವಗೃಹದಲ್ಲಿ ನಿಧನರಾದರು.
ಮೂಡುಬಿದಿರೆಯಲ್ಲಿ ಸುಮಾರು 45 ವರ್ಷಗಳಿಂದ ರಿಕ್ಷಾ ಚಾಲಕರಾಗಿ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದರು. ಹಲವು ತುಳು ನಾಟಕಗಳಲ್ಲಿ ಅಭಿನಯಿಸಿದ್ದ ಅವರು ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳ ಮೆರವಣಿಗೆಯಲ್ಲಿ ಸ್ತಬ್ದಚಿತ್ರಗಳಲ್ಲಿ ಕಲಾವಿದರಾಗಿದ್ದರು. ಮೂಡುಬಿದಿರೆ ಪೇಟೆಯ ಕೃಷ್ಣಕಟ್ಟೆಯಲ್ಲಿ ತನ್ನ ಮುಂದಾಳತ್ವದಲ್ಲಿ ಪ್ರತಿ ವರ್ಷ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆಸಿಕೊಂಡು ಬರುತ್ತಿದ್ದರು. ಅವರು ಪತ್ನಿ, ಓರ್ವ ಪುತ್ರ ಹಾಗೂ ನಾಲ್ವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.