ಮೂಡುಬಿದಿರೆ: ಉದ್ಯಮಿ ಜಿ. ಮೋಹನ ಶೆಣೈ ನಿಧನ
ಮೂಡುಬಿದಿರೆ: ಹಿರಿಯ ಉದ್ಯಮಿ, ಪಂಚಾಯತ್ ಬೋರ್ಡ್ ಮಾಜಿ ಸದಸ್ಯ, ಸಾಮಾಜಿಕ ಪ್ರಮುಖ ಜಿ. ಮೋಹನ ಶೆಣೈ ( 88ವ) ಬೆಂಗಳೂರಿನ ವಾತ್ಸಲ್ಯ ನಿವಾಸದಲ್ಲಿ ಸೋಮವಾರ ನಿಧನ ಹೊಂದಿದರು. ಅವರು ಪತ್ನಿ, ಆರು ಮಂದಿ ಪುತ್ರರನ್ನು ಅಗಲಿದ್ದಾರೆ.
ವರ್ತಕರಾಗಿ, ಉದ್ಯಮಿಯಾಗಿ ಮೂಡುಬಿದಿರೆಯಲ್ಲಿ ಸಾಮಾಜಿಕ ರಂಗದಲ್ಲಿಯೂ ಶೆಣೈಯವರು ಗುರುತಿಸಿಕೊಂಡಿದ್ದರು. ಜಿ. ವಾಸುದೇವ ಪೈ ಅವರಂತಹ ಸಾಮಾಜಿಕ ಧುರೀಣರ ನಿಕಟವರ್ತಿಯಾಗಿ ಸಮಾಜ ಮಂದಿರ ಸಭಾ,ಜಿ.ವಿ.ಪೈ ಮೆಮೋರಿಯಲ್ ಟ್ರಸ್ಟ್ , ರೋಟರಿ ಎಜುಕೇಶನ್ ಸೊಸೈಟಿಯ ಸ್ಥಾಪಕ ಸದಸ್ಯರಾಗಿ, ಬಾಬುರಾಜೇಂದ್ರ ಪ್ರೌಢ ಶಾಲಾ ಟ್ರಸ್ಟ್ ಸದಸ್ಯರಾಗಿ, ಐದು ದಶಕಗಳ ಕಾಲ ಮೂಡುಬಿದಿರೆ ರೋಟರಿ ಕ್ಲಬ್ ಮೂಲಕವೂ ಸಾಮಾಜಿಕ ಸೇವಾ ರಂಗದಲ್ಲಿ, ರಾಜಕೀಯ ರಂಗದಲ್ಲಿಯೂ ಅವರು ಸಕ್ರಿಯರಾಗಿದ್ದರು.


















