ಮೂಡುಬಿದಿರೆ : ಉಪನ್ಯಾಸಕರಿಬ್ಬರಿಂದ ವಿದ್ಯಾಥಿ೯ನಿಯ ಅತ್ಯಾಚಾರ

ಮೂಡುಬಿದಿರೆ : ಇಲ್ಲಿನ ಕಾಲೇಜೊಂದರ ಕಾಮುಕ ಉಪನ್ಯಾಸಕರಿಬ್ಬರು ಮತ್ತು ಅವರ ಸ್ನೇಹಿತನೋವ೯ ಸೇರಿಕೊಂಡು ವಿದ್ಯಾರ್ಥಿನಿಯೋರ್ವಳ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಬೆಂಗಳೂರಿನ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೂವರು ಆರೋಪಿಗಳನ್ನೂ ಅಲ್ಲಿನ ಪೊಲೀಸರು ಬಂಧಿಸಿದ್ದಾರೆಂದು ತಿಳಿದು ಬಂದಿದೆ.
ಫಿಸಿಕ್ಸ್ ಉಪನ್ಯಾಸಕ ನರೇಂದ್ರ, ಬಯಾಲಜಿ ಉಪನ್ಯಾಸಕ ಸಂದೀಪ್ ಹಾಗೂ ಅವರ ಸ್ನೇಹಿತ ಅನೂಪ್ ಎಂಬವರೇ ಬಂಧಿತ ಆರೋಪಿಗಳು.
ಉಪನ್ಯಾಸಕ ನರೇಂದ್ರ ನೋಟ್ಸ್ ನೀಡುವ ನೆಪದಲ್ಲಿ ವಿದ್ಯಾರ್ಥಿನಿಗೆ ಹತ್ತಿರವಾಗಿ ಸಲುಗೆ ಬೆಳೆಸಿಕೊಂಡಿದ್ದ.ಆಕೆ ಬೆಂಗಳೂರಿಗೆ ಹೋದ ನಂತರವೂ ಆಕೆಗೆ ನೋಟ್ಸ್ ನೀಡುವ ನೆಪದಲ್ಲಿ ಚಾಟ್ ಮಾಡುತ್ತಿದ್ದನೆನ್ನಲಾಗಿದೆ. ಅದೊಂದು ದಿನ ಬೆಂಗಳೂರಿನ ಮಾರತಹಳ್ಳಿಯಲ್ಲಿರುವ ಆತನ ಗೆಳೆಯನ ರೂಮಿಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದನೆನ್ನಲಾಗಿದೆ. ಅಲ್ಲದೆ ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆಯನ್ನೂ ಹಾಕಿದ್ದನೆನ್ನಲಾಗಿದೆ.
ಈ ವಿಚಾರ ಮತ್ತೊಬ್ಬ ಉಪನ್ಯಾಸಕ ಸಂದೀಪ್ ಗೆ ಗೊತ್ತಾಗಿ ಆತನೂ ಆಕೆಯ ಮೇಲೆ ಅತ್ಯಾಚಾರಕ್ಕೆತ್ನಿಸಿದ್ದ.ಆಕೆ ವಿರೋಧಿಸಿದಾಗ ‘ ನೀನು ಮತ್ತು ನರೇಂದ್ರ ಒಟ್ಟಿಗೆ ಇರುವ ಫೋಟೊ ಹಾಗೂ ವೀಡಿಯೋ ನನ್ನ ಬಳಿಯಿದೆ,ಅದನ್ನು ಕಾಲೇಜಿನಲ್ಲಿ ಎಲ್ಲರಿಗೂ ಗೊತ್ತಾಗುವಂತೆ ಮಾಡುವೆ ‘ ಎಂದು ಬೆದರಿಸಿ ಅತ್ಯಾಚಾರವೆಸಗಿದ್ದನೆನ್ನಲಾಗಿದೆ.
ಇನ್ನು ಸಂದೀಪ್ ಅತ್ಯಾಚಾರವೆಸಗಿದ್ದ ರೂಮ್ ಅನುಪ್ ಎಂಬಾತನದ್ದಾಗಿದ್ದು ಆತ ಕೂಡಾ ಆ ವಿದ್ಯಾರ್ಥಿನಿಯನ್ನು ಸಂಪರ್ಕಿಸಿ ‘ ನೀನು ನನ್ನ ರೂಮ್ ಗೆ ಬಂದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ, ಎಂದು ಬೆದರಿಸಿ ಆತನೂ ಅತ್ಯಾಚಾರವಸಗಿದ್ದಾನೆನ್ನಲಾಗಿದೆ.
ಈ ಮೂವರಿಂದಲೂ ಅನ್ಯಾಯಕ್ಕೊಳಗಾಗಿರುವ ವಿದ್ಯಾರ್ಥಿನಿ ಪೋಷಕರಲ್ಲಿ ವಿಷಯ ತಿಳಿಸಿದ್ದಾಳೆ.ಪೋಷಕರು ಆಕೆಯನ್ನು ಮಹಿಳಾ ಆಯೋಗಕ್ಕೆ ಕರೆದುಕೊಂಡು ಹೋಗಿ ದೂರು ನೀಡಿದ್ದು ಮಹಿಳಾ ಆಯೋಗದ ಮುಖಾಂತರ ಮಾರತಹಳ್ಳಿ ಪೊಲೀಸರಿಗೆ ದೂರು ನೀಡಲಾಗಿದೆ.ಪೊಲೀಸರು ಮೂವರು ಆರೋಪಿಗಳನ್ನೂ ಬಂಧಿಸಿದ್ದಾರೆಂದು ತಿಳಿದು ಬಂದಿದೆ.

add - S.L Shet ..march 2025

Related Posts

Leave a Reply

Your email address will not be published.