ಭಾರತೀಯ ಗಡಿ ಭದ್ರತಾ ಸೇನೆಗೆ ಸಂದೀಪ್ ಎಂ ಶೆಟ್ಟಿ ಮಾರೂರು ಆಯ್ಕೆ

ಮೂಡುಬಿದಿರೆ : ತಾಲೂಕಿನ ಮಾರೂರು ಗ್ರಾಮದ ಅರಮನೆ ಬಳಿಯ ರಾಜು ಶೆಟ್ಟಿ -ರತಿ ದಂಪತಿಯ ಪುತ್ರ ಸಂದೀಪ್ ಎಂ ಶೆಟ್ಟಿ ಮಾರೂರು ಇವರು ಭಾರತೀಯ ಗಡಿ ಭದ್ರತಾ ಸೇನೆಗೆ ಆಯ್ಕೆಯಾಗಿದ್ದಾರೆ. ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಪ್ರಾಥಮಿಕ ಶಾಲೆ ಮಾರೂರು ಹೊಸಂಗಡಿ ಇಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು ಎಸ್ ಡಿ ಎಂ ಪೆರಿಂಜೆಯಲ್ಲಿ ಮುಗಿಸಿ, ಪದವಿಪೂರ್ವ ಶಿಕ್ಷಣವನ್ನು ಸರಕಾರಿ ಪಿಯು ಕಾಲೇಜು ವೇಣೂರಲ್ಲಿ ಹಾಗೂ ಪದವಿ ಶಿಕ್ಷಣವನ್ನು ಮೂಡುಬಿದಿರೆ ಧವಲಾ ಕಾಲೇಜಿನಲ್ಲಿ ಪಡೆದಿರುತ್ತಾರೆ.

ಶಿಕ್ಷಣದ ಜೊತೆಗೆ ಎನ್ ಸಿ ಸಿ ಜೂನಿಯರ್ ಅಂಡರ್ ಆಫೀಸರ್ ಆಗಿ ಕಾರ್ಯ ನಿರ್ವಹಿಸಿದ್ದರು. ಬಾಲ್ಯದಲ್ಲಿಯೇ ದೇಶ ಸೇವೆ ಮಾಡಬೇಕೆಂಬ ಕನಸನ್ನು ಬೆನ್ನತ್ತಿ, ನಿರಂತರ ಕಠಿಣ ಪ್ರಯತ್ನ ಮಾಡಿ ಇದೀಗ ದೇಶ ಸೇವೆ ಮಾಡುವ ಅವಕಾಶ ಒದಗಿ ಬಂದಿದೆ. ಸಂದೀಪ್ ಅವರು ಮಂಗಳವಾರ ಮೂಡುಬಿದಿರೆಯಿಂದ ಜಾರ್ಖಂಡ್ ಗೆ ತರಬೇತಿಗಾಗಿ ತೆರಳಿದ್ದಾರೆ.

Related Posts

Leave a Reply

Your email address will not be published.