ಮೂಡಬಿದ್ರೆ : ತುಳುನಾಡ ಕೊಡಿ ಧ್ವಜಸ್ಥಂಭ ಲೋಕಾರ್ಪಣೆ

ನೇತಾಜಿ ಬ್ರಿಗೇಡ್ ಮೂಡುಬಿದಿರೆ ಇದರ ಮೂರನೇ ವರ್ಷದ ದೀಪಾವಳಿ ಉತ್ಸವದ ಪ್ರಯುಕ್ತ ಸ್ವರಾಜ್ಯ ಮೈದಾನದ ಬಳಿ ಇರುವ ಚಿಣ್ಣರ ಉದ್ಯಾನವನದಲ್ಲಿ ಮೊದಲ ಬಾರಿ “ತುಳುನಾಡ ಕೊಡಿ ಧ್ವಜಸ್ಥಂಭವನ್ನು ಶಾಸಕ ಉಮಾನಾಥ ಎ.ಕೋಟ್ಯಾನ್ ಸೋಮವಾರ ಲೋಕಾರ್ಪಣಿಗೊಳಿಸಿದರು.

ತುಳು ಭಾಷೆಯನ್ನು ಸಂವಿಧಾನದ ಆರ್ಟಿಕಲ್ 347 ಪ್ರಕಾರ ಅಧಿಕೃತ ಮಾಡುವ ಬಗ್ಗೆ ಮತ್ತು ತುಳು ಭಾಷೆಯನ್ನು ರಾಜ್ಯ ಭಾಷೆಯನ್ನಾಗಿ ಮಾಡುವ ವಿಧೇಯಕವನ್ನು ಜಿಲ್ಲೆಯ ಎಲ್ಲಾ ಶಾಸಕರುಗಳು ಮುಂದಿನ ಅಧಿವೇಶನದಲ್ಲಿ ಮಂಡನೆ ಮಾಡುವಂತ ನೇತಾಜಿ ಬ್ರಿಗೇಡಿನಿಂದ ಮನವಿ ಸಲ್ಲಿಸಲಾಯಿತು.

kodi dhvaja sthamba

ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮೂಡುಬಿದಿರೆಯಲ್ಲಿ ಮೊದಲ ಬಾರಿಗೆ ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ತುಳು ನಾಡ ಕೊಡಿ ಧ್ವಜವನ್ನು ಹಾರಿಸಿರುವುದು ಅಭಿನಂದನೀಯ ಕೆಲಸ, ನೇತಾಜಿ ಬ್ರಿಗೇಡ್ ಸಂಘಟನೆಯು ಸಮಾಜಮುಖಿಯಾದ ಹಲವು ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡುವಲ್ಲಿಯೂ ಮಹತ್ತರವಾದ ಪಾತ್ರವನ್ನು ವಹಿಸುತ್ತಿದ್ದಾರೆ ಅಲ್ಲದೆ ಅಸಹಾಯಕರಿಗೆ ಸಹಕಾರ ನೀಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ.

kodi dhvaja sthamba

ತುಳುಲಿಪಿ ತುಳುನಾಡ ಧ್ವಜಕ್ಕೆ ನಾವು ಹೆಚ್ಚಿನ ಮಾನ್ಯತೆಯನ್ನು ನೀಡಬೇಕಾಗಿದೆ ಮತ್ತು ನೇತಾಜಿ ಬ್ರಿಗೇಡ್ ಮಾಡುತ್ತಿರುವ ಉತ್ತಮ ಕೆಲಸಗಳಿಗೆ ಪೆÇ್ರೀತ್ಸಾಹ ನೀಡಬೇಕಾಗಿದೆ ಎಂದರು.ನೇತಾಜಿ ಬ್ರಿಗೇಡ್‍ನ ಸಂಚಾಲಕ ರಾಹುಲ್ ಕುಲಾಲ್ ಮಾತನಾಡಿ ದೀಪಾವಳಿ ಪ್ರಯುಕ್ತ 3ನೇ ವರ್ಷದ ಬೆಳಕಿನ ಹಬ್ಬವನ್ನು ದೀಪ ಬೆಳಗಿಸುವ ಮೂಲಕ ಆಚರಿಸುತ್ತಿದ್ದೇವೆ ಹಾಗೂ ಭಜನಾ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

kodi dhvaja sthamba

ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ವಾರ್ಡ್ ಸದಸ್ಯ ರಾಜೇಶ್ ನಾಯ್ಕ, ಪುರಸಭಾ ಸದಸ್ಯ ನವೀನ್ ಶೆಟ್ಟಿ, ನಾಮನಿರ್ದೇಶಿತ ಸದಸ್ಯ ಗಿರೀಶ್ ಕುಮಾರ್, ರಾಘವ ಹೆಗ್ಡೆ, ಲಕ್ಷ್ಮಣ, ಯಶೋಧರ ಮಾರೂರು, ನಾಗೇಶ್ ಇರುವೈಲು, ನೇತಾಜಿ ಬ್ರಿಗೇಡ್‍ನ ಪದಾಧಿಕಾರಿಗಳಾದ ಶಶಿಕುಮಾರ್, ಅಭಿಷೇಕ್ ಸಾಲ್ಯಾನ್, ದಿನೇಶ್ ಶೆಟ್ಟಿ, ಶಿವಾನಂದ, ಶರತ್ ಕುಂದರ್, ನಿತ್ಯಾನಂದ ಕುಲಾಲ್, ಜಯಶ್ರೀ ಮತ್ತು ಪ್ರಕಾಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.