ಮುಲ್ಕಿ: ಅಯ್ಯಪ್ಪ ಮಂದಿರದಲ್ಲಿ ಪಡಿಪೂಜೆ ಸೇವೆ

ಪ್ರತೀ ವರ್ಷದಂತೆ ಈ ವರ್ಷವೂ ಓಣಂ ಸಂದರ್ಭ ಅಯ್ಯಪ್ಪ ಸ್ವಾಮಿ ಮಾಲೆಧರಿಸಿ ಯಾತ್ರೆಗೆ ಹೊರಟ ಸ್ಬಾಮಿಗಳ ಮೂಲಕ ಅಯ್ಯಪ್ಪನಿಗೆ ಬಹಳ ಪ್ರಿಯವಾದ ಪಡಿಪೂಜೆಯು ಮುಲ್ಕಿ ಅಯ್ಯಪ್ಪ ಮಂದಿರದಲ್ಲಿ ನಡೆಯಿತು.

ಪೂಜೆಯ ಬಳಿಕ ಮಾತನಾಡಿದ ಗುರುಸ್ವಾಮಿ ಗಿರೀಶ್ ಪಲಿಮಾರು, ಜ್ಯೋತಿ ಸ್ವರೂಪನಾದ ಅಯ್ಯಪ್ಪನನ್ನು ಸಾಕ್ಷಾತ್ಕಾರಗೊಳಿಸುವ ನಿಟ್ಟಿನಲ್ಲಿ ಈ ದೀಪಾರಾಧನೆ ಅಂದರೆ ಪಡಿಪೂಜೆ ನಡೆಸಲಾಗಿದ್ದು, ಮಾಲೆಧಾರಿಗಳು ವೃತ ನೇಮ ನಿಷ್ಠೆಯಿಂದ ಓಣಂ ಪರ್ವಕಾಲದಲ್ಲಿ ಶಬರಿ ಸನ್ನಿಧಾನಕ್ಕೆ ತೆರಳಿ ತಮ್ಮ ಇಷ್ಟಾರ್ಥ ಸಿದ್ಧಿಸಿಕೊಳ್ಳುತ್ತಾರೆ ಎಂದರು. ಈ ಸಂದರ್ಭ ಅಯ್ಯಪ್ಪ ಮಂದಿರ ಸಮಿತಿಯ ಸದಸ್ಯರು, ಭಕ್ತಾಧಿಗಳು ಹಾಗೂ ವೃತಧಾರಿಗಳು ಇದ್ದರು.

Related Posts

Leave a Reply

Your email address will not be published.