ಮುಂಬೈ: ಮೊಗವೀರ ವ್ಯವಸ್ಥಾಪಕ ಮಂಡಳಿಯ ಪದಾಧಿಕಾರಿಗಳ ಆಯ್ಕೆ: ನೂತನ ಅಧ್ಯಕ್ಷರಾಗಿ ಅಂಬಲ್ಪಾಡಿ ಗಣೇಶ್ ಕಾಂಚನ್ ಆಯ್ಕೆ

ಮುಂಬಯಿ ಮಹಾನಗರದ ಹಿರಿಯ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ ಸಂಘಟನೆಯಾದ ಕರ್ನಾಟಕ ರಾಜ್ಯ ಪ್ರಶಸ್ತಿ-೨೦೧೨ರ ಪುರಸ್ಕೃತ ಮೊಗವೀರ ವ್ಯವಸ್ಥಾಪಕ ಮಂಡಳಿಯ ೨೦೨೫-೨೦೨೮ರ ಮೂರು ವರ್ಷಗಳ ಅವಧಿಗೆ ಆಡಳಿತ ಮಂಡಳಿ ರಚನೆಯಾಗಿದೆ. ಅಧ್ಯಕ್ಷರಾಗಿ ಅಂಬಲ್ಪಾಡಿ ಗಣೇಶ್ ಕಾಂಚನ್, ಉಪಾಧ್ಯಕ್ಷರಾಗಿ ಬೈಕಂಪಾಡಿಯ ಬಿ.ಕೆ. ಪ್ರಕಾಶ್ ಮತ್ತು ಒಡೆಯರಬೆಟ್ಟು ಅಶೋಕ್ ಎಸ್. ಸುವರ್ಣ ಅವರು ಆಯ್ಕೆಯಾಗಿದ್ದಾರೆ.

ಪ್ರಪ್ರಧಾನ ಕಾರ್ಯದರ್ಶಿಯಾಗಿ ಬಪ್ಪನಾಡು ದಿಲೀಪ್ ಕುಮಾರ್ ಮೂಲ್ಕಿ, ಜತೆ ಕಾರ್ಯದರ್ಶಿಗಳಾಗಿ ಬಪ್ಪನಾಡು ಪ್ರೀತಿ ಹರೀಶ್ ಶ್ರೀಯಾನ್,ಪೊಲಿಪು ದಯಾವತಿ ಎಂ. ಸುವರ್ಣ ಮತ್ತು ಕಲ್ಯಾಣಪುರ ಪ್ರಶಾಂತ್ ತಿಂಗಳಾಯ, ಪ್ರಧಾನ ಕೋಶಾಧಿಕಾರಿಯಾಗಿ ಕದಿಕೆ ದೇವ್‌ರಾಜ್ ಎಚ್. ಕುಂದರ್, ಜತೆ ಕೋಶಾಧಿಕಾರಿಗಳಾಗಿ ಗುಡ್ಡೆಕೊಪ್ಲ ಚಂದ್ರಕಾಂತ್ ಪಿ. ಸಾಲ್ಯಾನ್ ಮತ್ತು ಕುಳಾಯಿ ಹರೀಶ್ ಡಿ. ಸುವರ್ಣ, ಶಿಕ್ಷಣ ಅಜಿತ್ ಜಿ. ಸುವರ್ಣ, ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷರಾಗಿ ಕಣ್ಣಂಗಾರು ಡಿ. ಬಿ. ಪುತ್ರನ್, ಕಟ್ಟಡ ನಿರ್ವಹಣೆ ಮತ್ತು ಸೊತ್ತು ಸಮಿತಿ ಕಾರ್ಯಾಧ್ಯಕ್ಷರಾಗಿ ಬೈಕಂಪಾಡಿ ಧರ್ಮೇಶ್ ಜಿ. ಪುತ್ರನ್, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷರಾಗಿ ಹೊಯ್ಕೆ ಬಜಾರ್ ಮನಮೋಹನ್ ವೈ. ಕರ್ಕೇರ, ಮೊಗವೀರ ಕನ್ನಡ ಮಾಸಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಕಾಪು ಪುರುಷೋತ್ತಮ ಎಲ್. ಕರ್ಕೇರ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷರಾಗಿ ಎರ್ಮಾಳು ಬಡಾ ಚಂದ್ರಶೇಖರ್ ಎಸ್. ಕರ್ಕೇರ, ಕಾನೂನು ಮತ್ತು ಚಾರೀಟಿ ಕಚೇರಿ ಸಮಿತಿ ಕಾರ್ಯಾಧ್ಯಕ್ಷರಾಗಿ ಮೂಲ್ಕಿ ವರದರಾಜ್ ಎಸ್. ಶ್ರೀಯಾನ್, ಸದಸ್ಯತನ ಸಮಿತಿ ಕಾರ್ಯಾಧ್ಯಕ್ಷರಾಗಿ ಉಚ್ಚಿಲ ಕುಮಾರ್ ಕೆ. ಮೆಂಡನ್ ಆಯ್ಕೆಯಾದರು.
ಆಡಳಿತ ಸಮಿತಿ ಸದಸ್ಯರಾಗಿ ಉದ್ಯಾವರ ಹೇಮಲತಾ ಶಶಿಧರ ಹೆಜಮಾಡಿ, ಕಿರಣ್ ಎಸ್. ಮೆಂಡನ್, ಕಾಡಿಪಟ್ಟ ಪ್ರಜ್ವಲ್ ಡಿ. ಸಾಲ್ಯಾನ್, ಕಾಡಿಪಟ್ಟ ಮಹೇಂದ್ರ ಜಿ. ಕಾಂಚನ್, ಎರ್ಮಾಳು ಬಡಾ ರವಿರಾಜ್ ಎಚ್. ಕುಂದರ್, ಹೊಸಬೆಟ್ಟು ಅರುಣ್ ಕುಮಾರ್ ಎಚ್., ಚಿತ್ರಾಪು ರಾಜೇಶ್ ಎಸ್. ಪುತ್ರನ್, ಕುಳಾಯಿ ವಜ್ರಕಾಂತ್ ಬಿ. ಕುಂದರ್, ಕೊಕ್ಕರ್ಣೆ ಸಂತೋಷಬಿ. ಕೋಟ್ಯಾನ್, ಕಿರಿಮಂಜೇಶ್ವರ ಆರವಿಂದ್ ಪುತ್ರನ್, ’ಮೊಗವೀರ’ ಮಾಸಪತ್ರಿಕೆಯ ಗೌ. ಮ್ಯಾನೇಜರ್ ಆಗಿ ಚಿತ್ರಾಪು ಪ್ರಮೋದ್ ಆರ್. ಪುತ್ರನ್ ಆಯ್ಕೆಯಾದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಬೈಕಂಪಾಡಿ ನಿವೇದಿತಾ ಬಿ. ಸಾಲ್ಯಾನ್, ಕಾರ್ಯದರ್ಶಿ ಎರ್ಮಾಳು ಬಡಾ ರಾಜೇಶ್ವರಿ ಉಪ್ಪರು, ’ಮೊಗವೀರ’ ಕನ್ನಡ ಮಾಸಿಕ ಸಂಪಾದಕರಾಗಿ ಅಶೋಕ್ ಸುವರ್ಣ ಮರು ಆಯ್ಕೆ ಆಗಿರುವರು.